ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್(NCERT) ನೀಡುವ 2023 -24ನೇ ಸಾಲಿನ ರಾಷ್ಟ್ರೀಯ ಶೈಕ್ಷಣಿಕ ನಾವಿನ್ಯತಾ ಪುರಸ್ಕಾರಕ್ಕೆ ರಾಜ್ಯದ ಐವರು ಶಿಕ್ಷಕರು ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಜಿ.ವಿ. ಹರಿಪ್ರಸಾದ್, ಹುಬ್ಬಳ್ಳಿ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕಿ ಎಸ್.ಆರ್.ಶೀಲವಂತರ್, ಬೆಂಗಳೂರು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕಿ ಕೆ.ಎಸ್. ತನುಜಾ, ಆರ್.ವಿ. ಐಟಿಐ ಸಂಸ್ಥೆಯ ಕೆ.ಹೆಚ್. ಮಮತಾ, ಧಾರವಾಡದ ವನಿತಾ ಶಿಕ್ಷಕರ ಸಂಸ್ಥೆಯ ಸಂಧ್ಯಾ ಜಿ. ವೈದ್ಯ ಅವರು ಶೈಕ್ಷಣಿಕ ನಾವಿನ್ಯತಾ ಗೌರವಕ್ಕೆ ಪಾತ್ರರಾಗಿದ್ದಾರೆ.
ದೇಶದ 31 ಶಿಕ್ಷಕರು, ಪ್ರಶಿಕ್ಷಕರು ಹಾಗೂ ಅಧಿಕಾರಿಗಳಿಗೆ ರಾಷ್ಟ್ರೀಯ ಶೈಕ್ಷಣಿಕ ನಾವಿನ್ಯತೆ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.