ಸಿಂಧನೂರು : -ದಲಿತ ವಿಧ್ಯಾರ್ಥಿ ಪರಿಷತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68 ನೇ ಮಹಾ ಪರಿನಿರ್ವಾಹಣ ದಿನದ ಪ್ರಯುಕ್ತ ಸಂಜೆ 6:00ಗೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಬಾಬಾ ಸಾಹೇಬರ ಭಾವಚಿತ್ರಕ್ಕೆ ವಿದ್ಯಾರ್ಥಿಗಳಿಂದ ಸಾಮೂಹಿಕ ಕ್ಯಾಂಡಿಲ್ ಹಚ್ಚಿ ಪುಷ್ಪ ನಮನ ಸಮರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿ,
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮಿ ಹಾಗೂ ಪರಿಶಿಷ್ಟ ವರ್ಗಗಳ ತಾಲೂಕ ಅಧಿಕಾರಿ. ಭೀಮಣ್ಣ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಅಧ್ಯಕ್ಷ, ಮೌನೇಶ್ ಜಾಲವಾಡಗಿ, ಮಾತನಾಡಿ, ಅಂದು ಡಿಸೆಂಬರ್ 6, 1956 ಇಡೀ ಭಾರತದಲ್ಲಿ ಕಣ್ಣೀರ ಕೋಡಿ ಹರಿದ ದಿನ, ಕತ್ತಲಲಿದ್ದ ಭಾರತಕ್ಕೆ ಬೆಳಕಿನ ಕಿರಣ ನೀಡಿ ವಿಶ್ವವೇ ಬೆರಗಾಗುವಂತೆ ನೋಡಿದ್ದ ಆಧುನಿಕ ಭಾರತ ಸಂವಿಧಾನ ಪಿತಾಮಹ ಡಾ. ಅಂಬೇಡ್ಕರ್ ರವರು ನಿಬ್ಬಾಣ ಹೊಂದಿದ ದಿನ ಭಾರತದ ಕಣ್ತೆರೆಸಿ ಸಮನತೆಯ ಬೀಜ ಬಿತ್ತಿ ಹೋದ ಆ ಮಾನಾಯಕನ ಹೋರಾಟದ ಫಲವನ್ನು ಇಡಿ ಭಾರತವೇ ಇಂದು ಕೊಂಡಾಡುತ್ತದೆ ಎಂದರು.
ಈ ಸಂದರ್ಭದಲ್ಲಿ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಅಧ್ಯಕ್ಷ ಮೌನೇಶ್ ಜಾಲವಾಡಗಿ, ತಾಲೂಕ ಅಧ್ಯಕ್ಷ. ದುರ್ಗೇಶ್ ಕಲ್ಮಂಗಿ, ನರಸಪ್ಪ ಬಡಿಗೇರ್, ಸುರೇಶ್ ಎಲೆಕೂಡಲಗಿ, ಯರಿ ಸ್ವಾಮಿ ರೌಡಕುಂದ, ಅನೇಕರಿದ್ದರು,
ವರದಿ;- ಬಸವರಾಜ ಬುಕ್ಕನಹಟ್ಟಿ