Ad imageAd image

ಐನಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಅದ್ದೂರಿಯಾಗಿ ಜರುಗಿದ 2025ರ ಜನಪದ ಉತ್ಸವ

Bharath Vaibhav
ಐನಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಅದ್ದೂರಿಯಾಗಿ ಜರುಗಿದ 2025ರ ಜನಪದ ಉತ್ಸವ
WhatsApp Group Join Now
Telegram Group Join Now

ಐನಾಪುರ:  ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಜನಪದ ಉತ್ಸವ ದಿ.8,9,ರಂದು ಎರಡು ದಿನಗಳ ವರಗೆ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಜೋಳಧಾನ್ಯಕ್ಕೆ ಪೂಜೆ ಸಲ್ಲಿಸಿ ನಂತರ ಸಸಿಗೆ ನೀರೆರೆಯುವುದರ ಮೂಲಕ ಪ್ರಾಚಾರ್ಯ ಹಾಗೂ ಎಲ್ಲ ಉಪನ್ಯಾಸಕರು ಉದ್ಘಾಟಿಸಿದರು.
ಕಾಲೇಜಿಗೆ ಬಾಳೆಗೊನೆ, ಕಬ್ಬು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು., ಕಣಕಿಯಿಂದ ಗುಡಿಸಲು ತಯಾರಿಸಿ ಪಕ್ಕಾ ಹಳ್ಳಿಯಂತೆ ಕಾಣುವಂತೆ ಶೃಂಗರಿಸಿದರು. ಜೋಡು ಎತ್ತಿನ ಬಂಡಿಯೊಂದಿಗೆ ಕಾಲೇಜು ಪ್ರವೇಶ ದ್ವಾರದಿಂದ ಪ್ರಾಚಾರ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಲಿಗೆ ಬಾರಿಸುತ್ತ ನೃತ್ಯದ ಮೂಲಕ ಕಾರ್ಯಕ್ರಮದ ಸಭಾಭವನಕ್ಕೆ ತರಳಿದರು. ಇದು ಅಲ್ಲದೆ ರೈತರ ಕೃಷಿ ಸಾಮಗ್ರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ನಂತರ ರವಿ ಹಾದಿಮನಿ ಹಾಗೂ ತಂಡದಿಂದ ಡೊಳ್ಳಿನ ಪದ ,ಮೋಳೆಯ ಕಾಮಣ್ಣಾ ಮಾಂಗ,ತಂಡದಿಂದ ಕಣಿ ವಾದನ ಹಾಗು ಜನಪದ ಹಾಡುಗಳ ಕಾರ್ಯಕ್ರಮ ಜರುಗಿತು.
ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ಹಗ್ಗ ಜಗ್ಗಾಟ, ಲಗೋರಿ ,ಕುಂಟೆಬಿಲ್ಲೆ, ಚೌಕ ಬಾರ್ ಸೇರಿದಂತೆ ವಿವಿಧ ಜನಪದ ಆಟಗಳು ನೋಡುಗರ ಮನಸೂರೆಗೊಳ್ಳುವಂತಿತು.


ಕಾಲೇಜಿನ ಪ್ರಾಚಾರ್ಯರಾದ ಎನ್.ಕೆ ಮಾಂಗ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಜನಪದವೇ ನಮ್ಮ ಉಸಿರು, ನಮ್ಮ ಸಂಸ್ಕøತಿ, ಸಂಪ್ರದಾಯ ಇದನ್ನು ಸದಾ ನಾವು ಆಚರಿಸಬೇಕಾಗಿದೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕಾಗಿದೆ ಎಂದ ಅವರು ಪದವಿ ಕಾಲೇಜು ಹಂತದಲ್ಲಿ ಜಾನಪದ ಉತ್ಸವ ಮಾಡುತ್ತಿರುವುದು ತುಂಬಾ ಸಂತೋಷ ಮತ್ತು ಹರ್ಷ ತಂದಿದೆ.
ಜಾನಪದವು ಇಂದಿನ ವಿದ್ಯಾರ್ಥಿಗಳಿಗೆ ಅನಿವಾರ್ಯ ಮತ್ತು ಅಗತ್ಯವೆಂದು ಭಾವಿಸಿ, ಇದನ್ನು ನಡೆಸಲು ಕರ್ನಾಟಕ ರಾಜ್ಯ ಸರಕಾರವು ಶಿಕ್ಷಣ ಇಲಾಖೆಗೆ ಆದೇಶ ಮಾಡಿರುವುದು ಹಾಗೂ ಶಿಕ್ಷಣ ಇಲಾಖೆ ಕಾರ್ಯ ರೂಪಕ್ಕೆ ತಂದು ನಡೆಸುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದರು.
ಉಪನ್ಯಾಸಕ ಸಾಂಸ್ಕೃತಿಕ ಕಾರ್ಯಕ್ರಮಧಿಕಾರಿ ಕಪಿಲ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಜನಪದವು ಯಾವಾಗ ಹುಟ್ಟಿಕೊಂಡಿತು ಎಂದು ನಿಖರವಾದ ಇತಿಹಾಸವಿಲ್ಲ. ಮನುಜನ ಅರಿವಿನ ಉಗಮದಿಂದೊಂದಿಗೆ ಜನಪದ ಬೆಳೆದು ಬಂದಿದೆ. ಜನರು ತಮ್ಮದಿನ ನಿತ್ಯದ ಕಾಯಕದೊಂದಿಗೆ ಹಾಡು,ಕುಣಿತ,ಸಾಹಿತ್ಯ, ಕಲೆ, ಆಟ, ಬಯಲಾಟ, ನಾಟಕಗಳ ಮೂಲಕ ತಮ್ಮ ಸಂಭ್ರಮವನ್ನು ಬಹು ಸಡಗರದಿಂದ ಆಚರಿಸಿಕೊಂಡು ಬಂದಿರುವ ಈ ಕಲೆಗಳೇ ಜಾನಪವೆಂದು ಹೇಳುತ್ತೇವೆ ಎಂದರು.
ಎಲ್ಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಜಾನಪದ ಉಡುಪುಗಳು, ವಸ್ತ್ರಾಭರಣಗಳನ್ನು ಧರಿಸಿಕೊಂಡು ಜಾನಪದ ವಾತಾವರಣವನ್ನು ನಿರ್ಮಾಣ ಮಾಡಿದರು.
ಇ ಸಂದರ್ಭದಲ್ಲಿ ಉಪನ್ಯಾಸಕಿ ಶಾಂತಾ ಬಂಗಾರಿ,ಸೋಹಿಲ್ ಸತ್ತಿಕರ, ಮಹಾವೀರ ಖವಟಕೊಪ್ಪ,ಭಾಗ್ಯಶ್ರೀ ಎಂ ಎಸ್,ಸಾಗರಿಕಾ ಎಂ ಎನ್ ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ:ಮುರಗೇಶ ಗಸ್ತಿ 

WhatsApp Group Join Now
Telegram Group Join Now
Share This Article
error: Content is protected !!