ಬೆಂಗಳೂರು: ದಾಸರಹಳ್ಳಿ ಕ್ಷೇತ್ರದ ವಿಧಾನ ಸಭಾ ರಾಜಗೋಪಾಲ ನಗರ ವಾರ್ಡಿನ ವ್ಯಾಪ್ತಿಗೆ ಬರುವ ಕೆಂಪೇಗೌಡ ಲೇಔಟ್ದಲ್ಲಿರುವ ಸಮಾಜ ಸೇವಕ ಚಿಂತಕ ವಾಗ್ಮಿಗಳಾದ ಡಾ. ಸಂಗನಬಸಪ್ಪ ಬಿರಾದಾರ್ ರವರ ಸ್ವಗ್ರಹ ಕಚೇರಿಗೆ ಉತ್ತರ ಕರ್ನಾಟಕ ಜಾನಪದ ಪರಿಷತ್ ಹಿರಿಯ ಮುಖಂಡರಾದ ಎಂ ಹೆಚ್ ಪಾಟೀಲ್ ಅವರ ನೇತೃತ್ವದಲ್ಲಿ ಪರಿಷತ್ತಿನ ರಾಜ್ಯಾಧ್ಯಕ್ಷ ಹನುಮಂತಪ್ಪ ಮೇಡೆಗಾರ್, ರಮೇಶ ಜಮಖಂಡಿ, ಮಹೇಶ ಕೋತಿನ, ಪುರಾಣಿ ಕಾಟ್ರಹಳ್ಳಿ, ಸುರೇಶ್ ದೊಡ್ಡಮನಿ ಸೇರಿದಂತೆ ನಾಡಿನ ಜಾನಪದ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಉತ್ತರ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯ ಚಟುವಟಿಕೆಗಳು ನಾಡಿನ ಜನತೆಗೆ ಮಾದರಿಯಾಗುವಂತೆ ಪರಿಷತ್ ಮುಂದಿನ ಆಗೂ ಹೊಗುಳ ಮತ್ತು ಮಾಡಬೇಕಾದ ರೂಪುರೇಷೆಗಳ ಬಗ್ಗೆ ಡಾ. ಸಂಗನಬಸಪ್ಪ ಬಿರಾದಾರ್ ರವರ ಅಧ್ಯಕ್ಷತೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.
ಡಾ. ಸಂಗನಬಸಪ್ಪ ಬಿರಾದಾರ್ ಮಾತನಾಡಿ ಸಂಘ ಸಂಸ್ಥೆಗಳು ಬೆಳೆಯ ಬೇಕಾದರೆ ಎಲ್ಲರ ಮನಸ್ಸುಗಳು ಒಂದಾಗ ಬೇಕು ಮತ್ತು ಪರಿಷತಿಗೆ ನನ್ನ ಮಾರ್ಗದರ್ಶನ ಸಹಕಾರ ಸಹಾಯ ಇದ್ದೆ ಇರುತ್ತದೆ ಅದರಲ್ಲಿ ಯಾರಿಗೂ ಸಂಶಯ ಬೇಡ ನಿಮ್ಮ ಜೊತೆಗೆ ಸದಾ ಇರುತ್ತೇನೆ ನೀವು ನಮ್ಮ ಕಚೇರಿಗೆ ಬಂದಿದ್ದಕ್ಕಾಗಿ ತಮ್ಮೇರಿಗೂ ಹೃತ್ಪೂರ್ವಕ ಅಭಿನಂದನೆಗಳು. ಇದೆ ವೇಳೆ ಹಿರಿಯ ಮುಖಂಡ ಎಂ ಹೆಚ್ ಪಾಟೀಲ್ ಕೆಲವು ವಿಷಯಗಳು ಪ್ರಾಸ್ತಾವನೆ ಮಾಡಿದರು.
ಪರಿಷತ್ತಿನ ರಾಜ್ಯಾಧ್ಯಕ್ಷ ಹನುಮಂತಪ್ಪ ಮೇಡೆಗಾರ್ ಉತ್ತರ ಕರ್ನಾಟಕ ಜಾನಪದಕ್ಕೆ ಇತಿಹಾಸವಿದ್ದು ಅದರಲ್ಲಿ ಮಹಿಳೆಯರು ತಮ್ಮ ದಿನ ನಿತ್ಯದ ಕೆಲಸ ಮಾಡುವ ವೇಳೆ ಹಾಡು ಹಾಡುವ ಸಂಸ್ಕೃತಿ ಇದೆ ಬಿಸುವಾಗ, ಕುಟ್ಟುವಾಗ ಅನೇಕ ಹಾಡುಗಳನ್ನು ಹೇಳುವ ಪದ್ದತಿ ಬಗ್ಗೆ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟರು ಎಂದು ಉತ್ತರ ಕರ್ನಾಟಕ ಜಾನಪದ ಪರಿಷತ್ ಮಾದ್ಯಮ ರಾಜ್ಯಾಧ್ಯಕ್ಷ ಅಯ್ಯಣ್ಣ ಮಾಸ್ಟರ್ ಬಿ ವಿ ನ್ಯೂಸ್-5ಗೆ ತಿಳಿಸಿದ್ದಾರೆ.
ವರದಿ: ಅಯ್ಯಣ್ಣ ಮಾಸ್ಟರ್




