ಸಿರುಗುಪ್ಪ : –ನಗರದ ತಾಲೂಕು ಕಛೇರಿಯಲ್ಲಿ ತಾಳೂರು ಗ್ರಾಮದ ರೈತರು ಬರಪರಿಹಾರ ಅನುದಾನವನ್ನು ಸಮರ್ಪಕವಾಗಿ ಹಂಚುವಂತೆ ಆಗ್ರಹಿಸಿ ತಹಶೀಲ್ದಾರರಿಗೆ ಶಿರಸ್ತೆದಾರ ಸಿದ್ದಾರ್ಥ್ ಅವರ ಮೂಲಕ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ರಾಘವೇಂದ್ರರೆಡ್ಡಿ ಮಾತನಾಡಿ 2023-24ನೇ ಸಾಲಿನ ಮುಂಗಾರು ಬರ ಪರಿಹಾರವು ಕರೂರು ಹೋಬಳಿ ವ್ಯಾಪ್ತಿಯ ತಾಳೂರು ಗ್ರಾಮದ ರೈತರ ಖಾತೆಗಳಿಗೆ ಸಮರ್ಪಕ ಹಂಚಿಕೆಯಾಗಿಲ್ಲ.
ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್‌ನ ನಿಯಮಗಳನ್ನು ಉಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇದು ಬೆಳೆ ಸಮೀಕ್ಷೆಯ ವಿಫಲಕ್ಕೆ ಸಾಕ್ಷಿಯೆಂದು ಹೇಳಬಹುದಾಗಿದೆ. ಈಗಾಗಲೇ ಸರ್ಕಾರದಿಂದ ಬರ ಪರಿಹಾರ ಅನುದಾನವು 808 ರೈತರ ಖಾತೆಗಳಿಗೆ ಹಂಚಿಕೆಯಾಗಿವೆ.
ಆದರೆ ಇನ್ನುಳಿದ ರೈತರ ಖಾತೆಗಳಿಗೆ ಹಂಚಿಕೆಯಾಗದಿರುವ ಕಾರಣ ಕೇಳಿ ಮೇ.9ರಂದು ಮನವಿ ಸಲ್ಲಿಸಲಾಗಿತ್ತು. ಇದುವರೆಗೂ ಯಾವುದೇ ರೀತಿಯ ಮಾಹಿತಿ ನಮಗೆ ದೊರೆಕಿರುವುದಿಲ್ಲ.
ಅಲ್ಲದೇ ಬೇಕಾಬಿಟ್ಟಿಯಾಗಿ ಬೆಳೆ ಸಮೀಕ್ಷೆ ನಡೆಸಿ ತಮಗೆ ಬೇಕಾದವರಿಗೆ ಪರಿಹಾರ ನೀಡುತ್ತಿರುವ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ನಡೆಸಲಾಗುವುದು.ಈ ವಿಷಯದ ಬಗ್ಗೆ ಸಂಬಂದಿಸಿದ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳನ್ನು ವಿಚಾರಿಸಿದ್ದು ಸೂಕ್ತ ಮಾಹಿತಿ ದೊರೆಯುತ್ತಿಲ್ಲ
ಆದ್ದರಿಂದ ಸಭೆಯಲ್ಲಿ ಕೂಲಂಕೂಷವಾಗಿ ಪರಿಶೀಲನೆ ನಡೆಸಿ ಉಳಿದ ಎಲ್ಲಾ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.ಇದೇ ವೇಳೆ ರೈತರಾದ ಜಿ.ಮಲ್ಲಿಕಾರ್ಜುನರೆಡ್ಡಿ, ಬಿ.ಮಹಾನಂದರೆಡ್ಡಿ, ಕೆ.ಸುದಾಕರ, ಬಿ.ವೀರಭದ್ರರೆಡ್ಡಿ, ಟಿ.ಮದುಸೂಧನಗೌಡ, ಲಕ್ಷ್ಮಣ, ಇನ್ನಿತರರಿದ್ದರು.
ವರದಿ ಶ್ರೀನಿವಾಸ ನಾಯ್ಕ