ವಿಜಯಪುರ: ಜಿಲ್ಲೆಯ ಕಬ್ಸ ಸಂಕಲ್ಪ ಸ್ಕೂಲ್‌ನಲ್ಲಿ ಆಹಾರ ಮೇಳ ಅಡುಗೆ ವೈಭವ, ಹಾಗೂ ವಿವಿಧ ತರ ತರಹದ ತಿಂಡಿ ತಿನಿಸು ಆಹಾರಗಳ ಭವ್ಯ ಪ್ರದರ್ಶನ.
ವಿವಿಧ ಆಹಾರ ಮಳಿಗೆಯ ಉತ್ಸವ ಮಾಡಿದ್ದನ್ನು ಕಂಡು ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಪ್ರವೇಶ ದ್ವಾರದಲ್ಲಿ ರಂಗು ರಂಗಿನ ರಂಗೋಲಿಯ ಚಿತ್ತಾರವನ್ನು ಚಿತ್ರಿಸಿ, ಕಪ್ಪು ಹಲಗೆಯ ಮೇಲೆ ಆಹಾರ ಮಳಿಗೆಯ ಹೆಸರುಗಳನ್ನು ಸೂಚಿಸಿದ್ದರು.
ಎಲ್ಲ ಶಿಕ್ಷಕರು ಪಾಲಕರನ್ನು ಸ್ವಾಗತ ಮಾಡುತ್ತಾ ಅವರಿಗೆ ಆಹಾರ ಮಳಿಗೆಯ ಮಾಹಿತಿಯನ್ನು ನಿಡಿದರು.
ಈ ಕಾರ್ಯಕ್ರಮದಲ್ಲಿ ಪಾಲಕರು ಪೋಷಕರು ವಿವಿಧ ಸ್ಥಳೀಯರು ಬೇರೆ ಬೇರೆ ವಿದ್ಯಾರ್ಥಿಗಳ ಪ್ರದರ್ಶನಗಳನ್ನು ನೋಡಲು ಮತ್ತು ಒಟ್ಟಾಗಿ ಸೇರಿ ಸಂಭ್ರಮಿಸಲು ಆಚರಿಸುವ ಆಹಾರ ಪದ್ದತಿಯ ಒಂದು ಹಬ್ಬ ಹಾಗೂ ಮಕ್ಕಳಿಗೆ ವ್ಯೆವಹಾರದ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನ ಎಂದು ಸಂಕಲ್ಪ ಶಾಲಾ ಮುಖ್ಯ ಕಾರ್ಯನಿರ್ವಾಹಕರಾದ ದೀಪಕ್ ಆಗರ್ವಾಲ್ ಹೇಳಿದರು.
ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಮಕ್ಕಳು ಬಹಳ ಉತ್ಸಹಾದಿಂದ ತಮ್ಮ ತಮ್ಮ ಮಳಿಗೆಯ ಮುಂದೆ ನಿಂತು ಬಂದ ಪಾಕಕರಿಗೆ ಸ್ಥಳೀಯ ಆಹಾರ, ಕರಕುಶಲತೆ ಮತ್ತು ಕೃಷಿ ಸಂಪ್ರದಾಯಗಳನ್ನು ಪ್ರದರ್ಶಿಸಿದರು.
ತಾಯಿಂದರು, ಪಾಲಕರು ಮಕ್ಕಳಿಗೆ ಆಹಾರ ಮಳಿಗೆಯ ಬೇಕಾಗುವ ಸಾಮಗ್ರಿಗಳನ್ನು ಮಕ್ಕಳ ಜೊತೆಗೆ ನಿಂತು ಸಹಕಾರ ನೀಡಿದರು.
ಒಟ್ಟು ೨೮ ರಿಂದ ೩೦ ಮಳಿಗೆಗಳನ್ನು ಹಾಕಲಾಗಿತ್ತು. ಆಹಾರ ಮಳಿಗೆಗೆ ಕೋಪನ್ ಪಡೆಯುವ ಮೂಲಕ ಆಹಾರ ಪಾನಿಗಳಾದ ಪಾನಿಪುರಿ,ಒಡಾ ಪಾವ್, ಬರಗರ್, ಪಿಜಾ, ಸುರಕುಂಬಾ,ಹಾಲು, ಚಹಾ, ಕಿರಾಣಿ ಸಾಮಗ್ರಿಗಳು, ಸಿಹಿತಿಂಡಿ ಆಹಾರ, ಮತ್ತು ಮನರಂಜನೆ ಪ್ರದರ್ಶಿಸದಲ್ಲಿ ಕಂಡು ಬಂತು.
ಯೋಗಿತಾ ಆಗರ್ವಾಲ್, ಆಡಳಿತ ಮಂಡಳಿಯವರು ಹಾಗು ಶಿಕ್ಷಕ ವೃಂದ ಚಾಲನೆಯಲ್ಲಿ ಪಾಲ್ಗೊಂಡಿದ್ದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಗಳಿಗೆ ಪ್ರಪಂಚಕವಾದ ವ್ಯವಹಾರದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಶಿಕ್ಷಕರು ಸಪಲರಾದರು.
ಅಧ್ಯಕ್ಷರಾದ ಅಶೋಕ ಗರ್ವಾಲ್. ಸುನಿಲ್ ಅಗರ್ವಾಲ್. ಆಡಳಿತ ಮಂಡಳಿ ಈ ಆಹಾರ ಮಳಿಗೆ ಮಚ್ಚುಗೆ ವ್ಯಕ್ತಪಡಿಸಿದರು.
ವರದಿ :ಅಲಿ ಮಕಾನದಾರ




