ಎಪಿಎಂಸಿ ಯಾರ್ಡ್ ನಲ್ಲಿ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮಾನ್ ಜಯಂತೋತ್ಸವದಲ್ಲಿ 10ಸಾವಿರಕ್ಕೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ – ಅಧ್ಯಕ್ಷ ಸೇಲ್ವ ರಾಜು
ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಎಪಿಎಂಸಿ ಯಾರ್ಡ್ 9ನೇ ಗೇಟ್ ಬಳಿ ಪ್ರಸಿದ್ಧ ದೇವಸ್ಥಾನದಲ್ಲಿ ಒಂದಾದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸೇಲ್ವ ರಾಜ್ ಅವರ ನೇತೃತ್ವದಲ್ಲಿ ಹನುಮಾನ್ ಜಯಂತೋತ್ಸವ ಆಯೋಜಿಸಲಾಗಿತ್ತು.
ಯುವ ರಾಜಕಾರಣಿ ಮತ್ತು ದೊಡ್ಡ ಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಪ್ರಭಾವಿ ಮುಖಂಡ ಹಾಗೂ ಜಿಬಿಎ ಪ್ರಭಲ ಆಕಾಂಕ್ಷಿ ಅಭ್ಯರ್ಥಿ ವಿ ನಾಗರಾಜ್ ಆಗಮಿಸಿ ವೀರಾಂಜನೇಯ ಸ್ವಾಮಿ ಮತ್ತು ಹನುಮಾನ್ ದೇವರಿಗೆ ಪೂಜೆ ಪುನಸ್ಕಾರ ಸಲ್ಲಿಸಿ ದರ್ಶನ ಪಡೆದರು.
ನಂತರ ಅವರು ಮಾತನಾಡಿದ ಹನುಮಾನ್ ಜಯಂತಿ ಹನುಮಂತನ ಜನ್ಮದಿನವನ್ನು ಆಚರಿಸುತ್ತದೆ ಮತ್ತು ಶಕ್ತಿ, ಧೈರ್ಯ, ಭಕ್ತಿ ಮತ್ತು ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುತ್ತದೆ. ಈ ದಿನದಂದು ಭಕ್ತರು ಹನುಮಂತನ ಆಶೀರ್ವಾದ ಪಡೆಯಲು ಉಪವಾಸ, ಹನುಮಾನ್ ಚಾಲೀಸಾ ಪಠಣ, ಮತ್ತು ದೇವಸ್ಥಾನಗಳಿಗೆ ಭೇಟಿ ನೀಡುವುದರ ಮೂಲಕ ಆಚರಿಸುತ್ತಾರೆ, ಇದು ಭಯವನ್ನು ನಿವಾರಿಸಲು ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಸಾಧಿಸಲು ಸಹಾಯ ಮಾಡುತ್ತದೆ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಅಧ್ಯಕ್ಷ ಸೇಲ್ವ್ ರಾಜು ಅವರು ಹತ್ತು ಸಾವಿರಕ್ಕೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದು ಭಕ್ತಾದಿಗಳಿಗೆ ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ವಿ ನಾಗರಾಜ್ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ.ಆನಂದ್, ಬಿಜೆಪಿ ಹಿರಿಯ ನಾಯಕ ಮುನಿರಾಜು, ನವಿನ್,ಕೃಷ್ಣಮೂರ್ತಿ, ವಿಶ್ವ, ಆದಿ ನಾರಾಯಣ, ರವಿ, ಕುಮಾರ್, ಶಿವಣ್ಣ, ಲಲೀತ್ ಬಾಯಿ, ಪ್ರಕಾಶ್, ರಾಜು,ಡಾ .ಚೌದ್ರಿ ನಾಯ್ಡು, ಸೇರಿದಂತೆ ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




