ಸೇಡಂ:- ಪಟ್ಟಣದ ಉಡುಗಿ ರೋಡ್ ಹತ್ತಿರ ಬರುವ ಆಶ್ರಯ ಕಾಲೊನಿ 705 ರಲ್ಲಿ ಕುಡಿಯುವ ನೀರಿಲ್ಲದೆ ಜನರು ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.ಅದು ಅಲ್ಲದೆ ಈ ಕಾಲೋನಿಗೆ ಸುಮಾರು 8ವರ್ಷಗಳಿಂದ ಇದೇ ಸಮಸ್ಯೆ ಇದೆ ಎಂದು ಇಲ್ಲಿನ ಜನರ ಹೇಳಿಕೆ ಆಗಿರುತ್ತದೆ.
ನೀರು ಬಂದರೂ ಸಹ 8ದಿನಕ್ಕೊಮ್ಮೆ ಬರುತ್ತವೆ ಹಾಗೆ ಸಮಯ ಸಂಧರ್ಭವಿಲ್ಲದಂತೆ ಬರುತ್ತವೆ ಯಾವ ಸಮಯಕ್ಕೆ ನೀರು ಬರುತ್ತವೋ ಅಂತ ದಿನವಿಡೀ ಕಾದು ಕೂಡಬೇಕಾಗಿದೆ.ಕೂಲಿ ಕೆಲಸ ಮಾಡಿ ತಿನ್ನವವರು ನಾವು ನೀರೆ ಸಮಸ್ಯೆಯಾಗಿಬಿಟ್ಟಿದೆ ನಮಗೆ ಎಂದು ಜನ ತಮ್ಮ ಗೋಳನ್ನು ವ್ಯಕ್ತಪಡಿಸಿದರು.
ಈ ಸಮಸ್ಯೆ ಕುರಿತು ಪ್ರಜಾ ಸೇವಕ ಶೇಖರ್ ಉಪ್ಪಿ ಅವರು ಕೂಡ ತಮ್ಮ ಫೇಸ್ ಬುಕ್ ಪೇಜಿನಲ್ಲಿ ವೀಡಿಯೊಂದನ್ನ ಬಿಡುಗಡೆ ಮಾಡಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನಕೊಟ್ಟು ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡಿದರು.
ಅಧಿಕಾರಿಗಳು ಹೇಳಿದ್ದು ಏನು.?
ಮಳೆಗಾಲದ ಸಮಯದಲ್ಲಿ ನದಿ ನೀರು ಹರಿದು ಬಂದು ಅಲ್ಲಿ ಮರಳು ಜಮ ಆಗಿರುವುದರಿಂದ ಅಲ್ಲಿನ ಜನರಿಗೆ ನೀರಿನ ಸಮಯಸ್ಯೆ ಉಂಟಾಗುತ್ತಿದೆ.ಹಾಗೆ ಮಳೆಗಾಲದಲ್ಲಿ ಜಕ್ವೆಲ್ ಡ್ಯಾಮೇಜ್ ಆಗಿರುವುದರಿಂದ ಅಲ್ಲಿನ ಪಂಪು ಸರಿಯಾಗಿ ರನ್ ಮಾಡುವುದಕ್ಕೆ ಆಗುತ್ತಿಲ್ಲ ಅಲ್ಲಿವರೆಗೆ ಆಲ್ಟರ್ನೇಟಿವ್ ಆಗಿ ಮೋಟಾರ್ ಕೂಡಿಸಿ ಕೊಡುವ ಪ್ರಯತ್ನ ಇದೆ ನಾಳೆಯೊಳಗೆ ಈ ಸಮಸ್ಯೆ ಇರುವುದಿಲ್ಲ ಎಂದು ಸೇಡಂ ಚೀಫ್ ಆಫೀಸರ್ ಅವರು ಭಾರತ್ ವೈಭವ್ ನ್ಯೂಸ್ ಜೊತೆ ವಾಟ್ಸಾಪ್ ನಲ್ಲಿ ತಮ್ಮ ವಾಯ್ಸ್ ರೆಕಾರ್ಡ್ ಜೊತೆ ಹಂಚಿಕೊಂಡಿದ್ದಾರೆ.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.