Ad imageAd image

ವಿಕಲಚೇತನರ ಕಲ್ಯಾಣಕ್ಕೆ ಮಿಸಲಿಟ್ಟ ಹಣ ದುರ್ಬಳಿಕೆ ಕ್ರಮಕ್ಕೆ ಒತ್ತಾಯ

Bharath Vaibhav
ವಿಕಲಚೇತನರ ಕಲ್ಯಾಣಕ್ಕೆ ಮಿಸಲಿಟ್ಟ ಹಣ ದುರ್ಬಳಿಕೆ ಕ್ರಮಕ್ಕೆ ಒತ್ತಾಯ
WhatsApp Group Join Now
Telegram Group Join Now

ಸಿಂಧನೂರು: ನ 28, ತಾಲೂಕಿನ ತಿಡಿಗೋಳ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಹುಚ್ಚಪ್ಪ ಹಾಗೂ ಜೆ.ಇ ಮೌನೇಶ್ ರವರು ಪಂಚಾಯತಿ ವ್ಯಾಪ್ತಿಯ ವಿಕಲಚೇತರ ಕಲ್ಯಾಣ ಕಾರ್ಯಕ್ರಮಕ್ಕಾಗಿ ಮತ್ತು ಕಾಮಗಾರಿಗಳಿಗಾಗಿ ಮೀಸಲಿಟ್ಟ ಸುಮಾರು ೧ ಲಕ್ಷ ೧೬ಸಾವಿರ ರೂ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು.ಕೂಡಲೇ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ತಾಲೂಕ ಪ್ರ. ಕಾರ್ಯದರ್ಶಿ ಗುರುನಾಥ ಗದ್ರಟಗಿ ಒತ್ತಾಯಿಸಿದರು.

ಈ ಕುರಿತು ಪತ್ರಿಕೆ ಯೊಂದಿಗೆ ಮಾತನಾಡಿ,೨೦೨2-೨೩ ನೇ ಸಾಲಿನ ೧೫ ನೇ ಹಣಕಾಸು ಯೋಜನೆಯಡಿಯಲ್ಲಿ ವಿಕಲಚೇತರ ಕಲ್ಯಾಣ ಕಾರ್ಯಕ್ರಮಕ್ಕಾಗಿ ಮೀಸಲಿಟ್ಟ ಸುಮಾರು ಅನುದಾನವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಂಗಮಂದಿರ ಸಲುವಾಗಿ ಬಳಕೆ ಮಾಡಿದ್ದಾರೆ. ಆದರೆ ಈ ಹಿಂದೆ ಇದ್ದ ಸ್ಲಾಬ್ ಗಳಿಗೆ ಸಿಮೆಂಟ್ ಪ್ಲಾಸ್ಟರ್ ಮಾಡಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು. ಈ ಕುರಿತು ತಾಲೂಕು ಪಂಚಾಯತ ಇ.ಓ ರವರಿಗೆ ದೂರ ನೀಡಿದ್ದು ಒಂದು ವಾರದ ಒಳಗೆ ಕ್ರಮ ಕೈಗೊಳ್ಳಬೇಕು ತಪ್ಪಿದರೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ, ಶರಣಪ್ಪ ಕುರುಕುಂದ. ವಿರುಪಣ್ಣ. ಲಿಂಗಪ್ಪ ಇದ್ದರು

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!