Ad imageAd image

ನರೇಗಾ ಯೋಜನೆಯ ಕಾಯಕ ಬಂದುಗಳಿಗೆ ಹಣ ನೀಡುವಂತೆ ಒತ್ತಾಯ.

Bharath Vaibhav
ನರೇಗಾ ಯೋಜನೆಯ ಕಾಯಕ ಬಂದುಗಳಿಗೆ ಹಣ ನೀಡುವಂತೆ ಒತ್ತಾಯ.
WhatsApp Group Join Now
Telegram Group Join Now

ಸಿರುಗುಪ್ಪ :- ನಗರದ ತಾಲೂಕು ಪಂಚಾಯಿತಿ ಕಛೇರಿಯಲ್ಲಿ ದೇಶನೂರು ಗ್ರಾಮದ ಕಾಯಕ ಬಂದುಗಳು ನರೇಗಾ ಹಣವನ್ನು ನೀಡುವಂತೆ ಒತ್ತಾಯಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪವನ್‌ಕುಮಾರ್.ಎಸ್.ದಂಡಪ್ಪನವರ್ ಅವರಿಗೆ ಮನವಿ ಸಲ್ಲಿಸಿದರು.

ಕಾಯಕ ಬಂದು ದುರುಗಪ್ಪ ಮಾತನಾಡಿ ದೇಶನೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 2023-24, 2024-25ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಕಾಯಕ ಬಂದುಗಳಾಗಿ ಕೆಲಸ ಮಾಡಿರುತ್ತೇವೆ.
ಸರ್ಕಾರದ ಆದೇಶದ ಪ್ರಕಾರ ಖಾಯಂ ಮಹಿಳೆ ಕಾಯಕ ಬಂದುವಿಗೆ 5ರೂಪಾಯಿ ಮತ್ತು ಪುರುಷ ಕಾಯಕ ಬಂದುವಿಗೆ 4ರೂಪಾಯಿ ನೀಡುವಂತೆ ಆದೇಶ ಇರುತ್ತದೆ.ಆದರೆ ಇದುವರೆಗೂ ನಮಗೆ ಬರಬೇಕಾದ ಹಣವನ್ನು ನೀಡಿರುವುದಿಲ್ಲ. ಆದಷ್ಟು ಬೇಗನೇ ನಮ್ಮ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕೆಂದು ಆಗ್ರಹಿಸಿದರು.

ಗ್ರಾಮಸ್ಥರಾದ ಗಂಗಾಧರರೆಡ್ಡಿ, ರಾಘವೇಂದ್ರ ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಖಾಯಂ ಅಭಿವೃದ್ದಿ ಅಧಿಕಾರಿ ಇಲ್ಲದ ಕಾರಣ ನಮ್ಮ ಕೆಲಸ ಕಾರ್ಯಗಳಿಗಾಗಿ ತಾಲೂಕು ಮಟ್ಟದಲ್ಲಿ ಅಲೆಯುವಂತಾಗಿದೆ.ಕಳೆದ ಮೂರು ತಿಂಗಳಿಂದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅನ್ನಪೂರ್ಣ ಅವರು ಬರುತ್ತಿಲ್ಲವೆಂದು ಆರೋಪಿಸಲಾಯಿತು.

ಇದರಿಂದಾಗಿ ಗ್ರಾಮದಲ್ಲಿ ಸೊಳ್ಳೆಗಳ ಕಾಟದಿಂದಾಗಿ ಡೆಂಗ್ಯೂ, ಮಲೇರಿಯಾ, ಟೈಪೆಡ್ ಜ್ವರದ ಭೀತಿ ಹೆಚ್ಚಾಗಿ ಗ್ರಾಮಸ್ಥರು ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ.ಪಂಚಾಯಿತಿಯಲ್ಲಿ ಸಿಬ್ಬಂದಿಗಳದೇ ಅಧಿಕಾರವಾಗಿದೆ. ಏನೇ ಕೇಳಿದರೂ ನಿರ್ಲಕ್ಷ್ಯ ಮಾಡುತ್ತಾ, ಪಿಡಿಓ ಇಲ್ಲದ ಬಗ್ಗೆ ಹೇಳುತ್ತಾರೆ.

ಗ್ರಾಮದಲ್ಲಿ ಸೊಳ್ಳೆಗಳ ಕಾಟದಿಂದಾಗಿ ಡೆಂಗ್ಯೂ, ಮಲೇರಿಯಾ, ಟೈಪೆಡ್ ಜ್ವರದ ಭೀತಿ ಹೆಚ್ಚಾಗಿ ಗ್ರಾಮಸ್ಥರು ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ. ನಮ್ಮ ಪಂಚಾಯಿತಿಗೆ ಖಾಯಂ ಅಧಿಕಾರಿ ಬೇಕಾಗಿದೆ.ಗ್ರಾಮದಲ್ಲಿ ಜೆಜೆಎಮ್ ಯೋಜನೆ ಸಂಪೂರ್ಣ ವೈಫಲ್ಯವಾಗಿದೆ. ಇದರಿಂದಾಗಿ ಉತ್ತಮ ರಸ್ತೆ ಹಾಳಾಗಿದೆ.

ಇನ್ನು ಮುಂದಾದರೂ ಸಂಬಂದಿಸಿದ ಮೇಲಾಧಿಕಾರಿಗಳು ಸೂಕ್ತ ನಿರ್ವಹಣೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.ಇದೇ ವೇಳೆ ಗ್ರಾಮಸ್ಥರಾದ ಅಂಜಿನೇಯ್ಯ, ಉರುಕುಂದ, ಈರಮ್ಮ ಇನ್ನಿತರರಿದ್ದರು.

ವರದಿ : -ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!