Ad imageAd image

ನರೇಗಾ ಯೋಜನೆಯಲ್ಲಿ ಹೂಳೆತ್ತಿದ್ದ ಟ್ರ್ಯಾಕ್ಟರ್ ಬಾಡಿಗೆ ನೀಡುವಂತೆ ಒತ್ತಾಯ

Bharath Vaibhav
ನರೇಗಾ ಯೋಜನೆಯಲ್ಲಿ ಹೂಳೆತ್ತಿದ್ದ ಟ್ರ್ಯಾಕ್ಟರ್ ಬಾಡಿಗೆ ನೀಡುವಂತೆ ಒತ್ತಾಯ
WhatsApp Group Join Now
Telegram Group Join Now

ಸಿರುಗುಪ್ಪ : -ನರೇಗಾ ಯೋಜನೆಯಲ್ಲಿ ಹೂಳು ತೆಗೆಯುವಲ್ಲಿ ಬಳಸಲಾದ ಟ್ರ್ಯಾಕ್ಟರ್ ಗಳ ಬಾಡಿಗೆಯನ್ನು ನೀಡುವಂತೆ ಒತ್ತಾಯಿಸಿ ಕೆಂಚನಗುಡ್ಡ ಗ್ರಾಮ ಪಂಚಾಯಿತಿ ಕಚೇರಿಗೆ ಹೆರಕಲ್ ಮತ್ತು ಕೆಂಚನಗುಡ್ಡ ಗ್ರಾಮದ ಟ್ರ್ಯಾಕ್ಟರ್ ಗಳ ಮಾಲೀಕರು ಪಂಚಾಯಿತಿ ಕಾರ್ಯದರ್ಶಿ ಬಸವನಗೌಡ ಅವರ ಮೂಲಕ ಮನವಿ ಸಲ್ಲಿಸಿದರು.

ಕೆಂಚನಗುಡ್ಡ ಗ್ರಾಮದ ಮುಖಂಡ ಬಿ.ಸುರೇಶ ಮಾತನಾಡಿ ಕೆಂಚನಗುಡ್ಡ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿಯಲ್ಲಿ ಮಾಳಾಪುರ ಕೆರೆಯಲ್ಲಿ ಹೆರಕಲ್ ಮತ್ತು ಕೆಂಚನಗುಡ್ಡ ಗ್ರಾಮದ ಖಾತ್ರಿ ಯೋಜನೆಯ ಕಾರ್ಮಿಕರು ತೆಗೆದ ಹೂಳೆತ್ತಲು ಬಿಡಲಾದ ಟ್ರ್ಯಾಕ್ಟರ್ ಗಳ ಬಾಡಿಗೆ ಹಣವನ್ನು ಎರಡು ವರ್ಷಗಳೇ ಕಳೆದರೂ ನೀಡಿರುವುದಿಲ್ಲ.

ಆ ಸಮಯದಲ್ಲಿ ಸದರಿ ಕಾಮಗಾರಿಯನ್ನು ನಮ್ಮ ಸ್ವಂತ ಖರ್ಚಿನಲ್ಲೇ ಟ್ರ್ಯಾಕ್ಟರ್ ಡೀಸೆಲ್, ಚಾಲಕನ ಭತ್ಯೆಯನ್ನು ನೀಡಿದ್ದು, ನಮಗೆ ಇಲ್ಲಿಯವರೆಗೂ ಯೋಜನೆಯಿಂದ ಹಣ ಬಾರದೇ ನಮಗೆ ಅನ್ಯಾಯವಾಗಿದೆ.ಈ ವಿಷಯವಾಗಿ ನಾವುಗಳು ಕೆಂಚನಗುಡ್ಡ ಗ್ರಾಮ ಪಂಚಾಯಿತಿಗೆ ಹೋಗಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಆದಕಾರಣ ತಾವು ಕೂಡಲೇ ಸಂಬಂದಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ನಮಗೆ ಬರಬೇಕಾದ ಬಾಡಿಗೆ ಹಣವನ್ನು 10 ದಿನಗಳೊಳಗೆ ಕೊಡಿಸಬೇಕು. ಈ ಬಗ್ಗೆ ಕ್ರಮಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಕಛೇರಿಗೆ ಬೀಗ ಹಾಕಿ ಉಗ್ರ ಹೋರಾಟ ಮಾಡಬೇಕಾಗುವುದು.

ಆದ್ದರಿಂದ ಇದಕ್ಕೆ ಅವಕಾಶ ಮಾಡಿಕೊಡದೇ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ ನಮಗೆ ಬರಬೇಕಾದ ಹಣವನ್ನು ಬಿಡುಗಡೆಗೊಳಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.ಇದೇ ವೇಳೆ ಹೆರಕಲ್ ಮತ್ತು ಕೆಂಚನಗುಡ್ಡ ಗ್ರಾಮದ ಮುಖಂಡರಾದ ರಾಮಪ್ಪ, ಬಿ.ವೀರೇಶ, ಬಿ.ಶರಣಪ್ಪ, ಎಮ್.ಅಡಿವೆಪ್ಪ, ಎಮ್.ಅಂಬರೇಶ, ಬಿ.ಹನುಮಂತ, ಕೆ.ವೀರೇಶ, ಕೆ.ಗೋವಿಂದ, ಕೆ.ಮುತ್ತಣ್ಣ, ಕೆ.ಜಿತೇಂದ್ರ ಇದ್ದರು.

ವರದಿ ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!