ಸೌಜನ್ಯಳ ಅತ್ಯಾಚಾರ ಕೊಲೆ ಆರೋಪ ಪ್ರಕರಣ
ಕಾಗವಾಡ : ಧರ್ಮಸ್ಥಳದ ಸೌಜನ್ಯಾಳ ಅತ್ಯಾಚಾರ-ಕೊಲೆಯಾಗಿ 13 ವರ್ಷ ಕಳೆದರು ನ್ಯಾಯ ಸಿಗದೆ ಇರುವುದರಿಂದ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಕಾಗವಾಡ ಪಟ್ಟಣದ ಸಮಸ್ತ ಬಹುಜನ ಬಾಂಧವರು. ವಿವಿಧ ಸಂಘಟನೆಗಳು ಹಾಗೂ ನಾಗರಿಕರು ಕಾಗವಾಡ ತಹಸಿಲ್ದಾರ ರವಿಂದ್ರ ಹಾದಿಮನಿಯವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ.ಅರ್ಪಿಸಿದರು.
ಅವರು ದಿ 9ರಂದು ಗುರುವಾರ ಕಾಗವಾಡ ತಹಸಿಲ್ದಾರ ಕಛೇರಿಗೆ ತರಳಿ ಮನವಿ ಅರ್ಪಿಸಿ ಮಾತನಾಡಿದ ಸಂಘಟನಾಕಾರರು, ದಿನಾಂಕ 09-10-2012 ರಂದು ಧರ್ಮಸ್ಥಳದಲ್ಲಿ ಸೌಜನ್ಯ ಎನ್ನುವ 17 ವಯಸ್ಸಿನ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಿ ಕೊಲೆಯನ್ನು ಮಾಡಿದ್ದು ಇರುತ್ತದೆ. ಈ ಘಟನೆ ನಡೆದು ಈಗ 13 ವರ್ಷಗಳಾದರು ಇನ್ನು ಸಹಿತ ಅವಳಿಗೆ ನ್ಯಾಯ ದೊರೆತಿರುವುದಿಲ್ಲಾ.
ಈ ಘಟನೆಗೆ ಸಂಬಂದಿಸಿದಂತೆ CBI ವಿಚಾರಣೆ ಆದರು ಸಹಿತ ಅವಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿತರು ಸಿಕ್ಕಿರುವುದಿಲ್ಲ.
ಇದಕ್ಕೆ ಸಂಬಂಧಿಸಿದಂತೆ ಈಗ ಅನೇಕ ಹೊರಾಟಗಳು ನಡೆಯುತಿದ್ದು, ಆದರೆ ಹೊರಾಟ ಮಾಡುವ ಹೊರಾಟಗಾರರನ್ನೆ ಬಂದಿಸುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ತಾವು ಸೌಜನ್ಯಳ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆಯನ್ನು ಮುಚ್ಚಿ ಹಾಕುಲು ಪ್ರಯತ್ನ ಪಡುತ್ತಿರುವವರ ಬಗ್ಗೆ ಸಮಗ್ರ ತನಿಖೆಯನ್ನು ನಡೆಸಿ ಸೌಜನ್ಯಳಿಗೆ ನ್ಯಾಯ ದೊರಕಿಸಿ ಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವು ನಮ್ಮ ಎಲ್ಲ ಸಂಘಟನೆಗಳ ಮುಖಾಂತರ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಸಂಘಟನಾಕಾರರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಆಕಾಶ್ ದೇವನೆ, ಓಂಕಾರ್ ಚವ್ಹಾಣ ರಾಕೇಶ್ ಕಾಂಬಳೆ ರವೀಂದ್ರ ಕಾಂಬಳೆ ಮಲ್ಲಿಕಾಜುನ್ ಕಾಂಬಳೆ ರೋಹಿತ್ ಕಾಂಬಳೆ ಇತರರು ಇದ್ದರು.
ವರದಿ : ಚಂದ್ರಕಾಂತ ಕಾಂಬಳೆ




