
ಖಾನಾಪುರ: ಹೌದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಾಗರಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ತವಾಡದ ರೈತರು ಬೆಳೆದ ಭತ್ತದ ಬೆಳೆಗೆ ಕಾಡಾನೆಗಳು ಹಾಗೂ ಕಾಡು ಹಂದಿಗಳೇ ಕಂಟಕ ಎಂಬ ವರದಿ ತಯಾರಿಸಿದ್ದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಬೆಳಗಾವಿ ಜಿಲ್ಲೆಯ ಉಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದ N.E ಕ್ರಾಂತಿಯವರ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದರು.
ಇದಕ್ಕೆ ಕೂಡಲೇ ಎಚ್ಚೆತ್ತ ಜಿಲ್ಲಾ ಉಪ ಮುಖ್ಯ ಸಂರಕ್ಷಣಾ ಅಧಿಕಾರಿಗಳು ಆದ N E ಕ್ರಾಂತಿಯವರು ತಮ್ಮ ನಾಗರಗಾಳಿ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆದೇಶ ಮಾಡಿದ ಹಿನ್ನೆಲೆ ನಿನ್ನೆ ಆ ಸ್ಥಳಕ್ಕೆ ಭೇಟಿಕೊಟ್ಟು ರೈತರ ಸಮಸ್ಯೆಗಳನ್ನು ಆಲಿಸಿ ಕಾಡಾನೆಗಳು ಹಾಗೂ ಕಾಡು ಹಂದಿಗಳ ಹಾವಳಿಗಳ ನಿಯಂತ್ರಣಕ್ಕೆ ಸೋಲಾರ್ ತಂತಿ ಬೇಲಿ ಪೂರೈಕೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇಂದರಿಂದ ಸಂತೋಷ ಗೊಂಡ ಬಸ್ತವಾಡ ಬಾಗದ ಭತ್ತ ಬೆಳೆಯುವ ರೈತರು ಸಂತೋಷಗೊಂಡು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನಮ್ಮ ನ್ಯೂಸ್ ಸಮೂಹಕ್ಕೆ ಧನ್ಯವಾದ ತಿಳಿಸಿದ್ದಾರೆ.
ವರದಿ: ಬಸವರಾಜು




