ಬೆಂಗಳೂರು : -ಡಾ.ಬಿ.ಆರ್ ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಪೀಠಿಕೆಯನ್ನು ಪ್ರತಿಯೋಬ್ಬರು ಓದಿ ತಿಳಿದುಕೊಂಡು ಬೇರೆಯವರಿಗೆ ತಿಳಿಸುವ ಕೆಲಸ ಮಾಡ ಬೇಕು ಎಂದು ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕರಣ ಶೀಲ ಟಿ ಮೌರ್ಯ ಹೇಳಿದರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ
ಕರಣ ಶೀಲ ಟಿ ಮೌರ್ಯ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್. ಜಡಗಿ ಇವರ ನೇತೃತ್ವದಲ್ಲಿ ಸಂಘದ ಸಭೆ ಹಾಗೂ ವಿವಿಧ ಇಲಾಖೆಯ ಸರಕಾರಿ ಅರೆ ಸರಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರನ್ನು ಜಿಲ್ಲಾ ಘಟಕಕ್ಕೆ ಸೇರ್ಪಡೆ ಕಾರ್ಯಕ್ರಮವನ್ನು ನಗರದ ಆರ್ ಗುಂಡೂರಾವ್ ಕ್ರೀಡಾಂಗದ ಹಾಲ್ ನಲ್ಲಿ ಆಯೋಜಿಸಲಾಗಿತ್ತು.
ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಪೀಠಿಕೆ ಓದುವ ಮೂಲಕ ಸೇರ್ಪಡೆ ಮಾಡಿ ಕೊಂಡರು ನಂತರ ಭಾರತ ವೈಭವ ಪತ್ರಿಕೆಯ ಆಲ್ರೌಂಡರ್ ರಿಪೋರ್ಟರ್ ಪ್ರಶಸ್ತಿ ಪುರಸ್ಕೃತರಾದ ಅಯ್ಯಣ್ಣ ಮಾಸ್ಟರ್, ಭೀಮ ಸಂದೇಶ ಪತ್ರಿಕೆಯ ಸಂಪಾದಕ ವೈ ಜಿ ನರಸಿಂಹಮೂರ್ತಿ ಮತ್ತು ಸಂಜೆ ಸಮಯ ಪತ್ರಿಕೆಯ ಪ್ರತಿನಿಧಿ ಕೆಂಪರಾಜು ಇವರುಗಳಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಕರಣ ಶೀಲ ಟಿ ಮೌರ್ಯ ಮಾತನಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್.ಜಡಗಿ ಸರ್ವರಿಗೂ ಸ್ವಾಗತಿಸಿದರು.ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಆರ್ ನಾಗರಾಜ್ ಅವರು ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಸುಂದರ್ ರಾಜ್ ಬೆಸ್ಕಾಂ,ನಾಗರಾಜ್ ಕೆಪಿಟಿ ಸಿಎಲ್, ಕೃಷ್ಣ ಅರೋಗ್ಯ,ಕೃಷ್ಣಯ್ಯ ಬಿಎಂಟಿ ಸಿ,ವಿಜಯ್ ಕುಮಾರ್,ಇಎಸ್ಐ, ಶೇಖರ್ ಗ್ರಾಮೀಣಾಭಿವೃದ್ಧಿ,ಕೆಪಿಟಿಸಿಎಲ್ ಬಸವರಾಜ್, ಪ್ರವೀಣ್ ಕುಮಾರ್, ಧರಣೇಶ್, ಕೆಂಪರಾಜು (ಕೆಆರ್ಐಎಲ್),
ಅಯ್ಯಣ್ಣ ವಾರ್ತಾ ಮತ್ತು ಪ್ರಸಾರ, ಅದಿನಾರಾಯಣ,ಬಿಬಿಎಂಪಿ,
ಮಂಜಣ್ಣಾ, ಗ್ರಾಮೀಣಾಭಿವೃದ್ಧಿ, ರಾಘವೇಂದ್ರಉನ್ನತ ಶಿಕ್ಷಣ, ಬಸವರಾಜ್ ಅರಣ್ಯ, ಕಾವೇರಿ ಅರಣ್ಯ, ಕೆ ನಾಗಣ್ಣ ಕ್ರೀಡಾ,
ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ಪದಾಧಿಕಾರಿಗಳು ಸದಸ್ಯರು ಮುಂತಾದವರು ಇದ್ದರು.
ವರದಿ:- ಅಯ್ಯಣ್ಣ ಮಾಸ್ಟರ್