ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹೆಗ್ಗನಹಳ್ಳಿ ವಾರ್ಡಿನ ಮೋಹನ್ ಚಿತ್ರ ಮಂದಿರ ಹತ್ತಿರ ಇರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಸಂಘಟನಾ ಕಾರ್ಯದರ್ಶಿ ಸಪ್ತಗಿರಿ ಆನಂದ್ ಅವರ ಕಚೇರಿಗೆ ಶಾಸಕ ಎಸ್ ಮುನಿರಾಜು ಭೇಟಿ ನೀಡಿದರು.
ನಂತರ ವಾರ್ಡ ಅಭಿವೃದ್ಧಿ ಬಗ್ಗೆ ಮತ್ತು ರಾಜಕೀಯ ಕುರಿತು ಮಾತುಕತೆ ನಡೆಸಿದರೆಂದು ತಿಳಿದು ಬಂದಿದೆ ಆದರೆ ಏನು ಮಾತಾಡಿದರೂ ಎಂದು ಗೊತ್ತಾಗಿಲ್ಲ.
ಈ ಸಂದರ್ಭದಲ್ಲಿ ಆರ್ ಎಸ್ ಎಸ್ ಮುಖಂಡ ಹಾಗೂ ಬೆಂಗಳೂರು ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ರಂಗಸ್ವಾಮಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಪುಟ್ಟಸ್ವಾಮಿ, ಬಿಜೆಪಿ ಮಾಜಿ ಅಧ್ಯಕ್ಷ ಕೆ.ಸಿ ರವಿ, ಮಂಜುನಾಥ್ ಸೇರಿದಂತೆ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಶಾಸಕ ಎಸ್ ಮುನಿರಾಜು ಅವರಿಗೆ ಸಾಥ್ ನೀಡಿದರು.
ವರದಿ: ಅಯ್ಯಣ್ಣ ಮಾಸ್ಟರ್




