ಮೊಳಕಾಲ್ಮೂರು:ಬಿಜೆಪಿ ಮಂಡಲದ ವತಿಯಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ 82ನೇ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಬ್ರೆಡ್ ವಿತರಣೆ ಮಾಡಿದರು.
ನಾ ಕಂಡ ಶ್ರೇಷ್ಠ ನಾಯಕ ಧೀಮಂತ ನಾಯಕ ಸೈಕಲ್ ನಲ್ಲಿ ಓಡಾಡಿ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತಂದಿರುವ ನಾಯಕ ನಮ್ಮ ಯಡಿಯೂರಪ್ಪ ಎಂದು ಮಂಡಲ ಅಧ್ಯಕ್ಷರಾದ ಕೆ ಟಿ ಶ್ರೀರಾಮ ರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರ ಜನ್ಮದಿನದ ಪ್ರಯುಕ್ತ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಣೆ ಮಾಡಿ ಮಾತನಾಡಿದರು.

ಕರ್ನಾಟಕದಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಧೀಮಂತ ನಾಯಕ ಅನೇಕ ಜನಪರ ಯೋಜನೆಗಳನ್ನು ನೀಡಿದ ಸರದಾರ ರೈತರ ಬಂಧು ಒಳ್ಳೆಯ ಕಾರ್ಯಕ್ರಮಗಳನ್ನು ನೀಡಿದ ಮಾಜಿ ಮುಖ್ಯಮಂತ್ರಿಗಳು ಎಂದು ತಿಳಿಸಿದರು, ಇಂತಹ ನಾಯಕರಿಗೆ ಆರೋಗ್ಯ ಐಶ್ವರ್ಯ ಕೊಟ್ಟು ಆ ದೇವರು ಕಾಪಾಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಡಾ ಮಂಜುನಾಥ್, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಸಿದ್ದಣ್ಣ, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ಮುಖಂಡರಾದ ಡಿ ಎಂ ಈಶ್ವರಪ್ಪ ಚಂದ್ರಶೇಖರ್ ಗೌಡ್ರು, ಪ್ರಭಾಕರ್, ತಿಪ್ಪೇಸ್ವಾಮಿ ,ಸಿದ್ದಾರ್ಥ್, ಪಟ್ಟಣ ಪಂಚಾಯತಿ ಸದಸ್ಯರಾದ ಮಂಜಣ್ಣ ಭೀಮಣ್ಣ ರವಿ ವಿನಯ್ ಕುಮಾರ್ ಅರ್ಜುನ್ ಯುವ ಮುಖಂಡರಾದ ಹೇಮಂತ್ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಇನ್ನೂ ಹಲವರು ಉಪಸ್ಥಿತರಿದ್ದರು.
ವರದಿ :ಪಿಎಂ ಗಂಗಾಧರ




