ಅಥಣಿ: ಮತದಾನ ಭಾರತ ದೇಶದ ಪ್ರಜೆಯಾದ ನಮ್ಮ ಕರ್ತವ್ಯ, ದೇಶದ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ಮತ ಚಲಾಯಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ತಿಳಿಸಿದರು.
ತಾಲೂಕಿನ ಕಾಗವಾಡ ವಿಧಾನಸಭೆ ಮತಕ್ಷೇತ್ರದ ತಾಂವಶಿ ಗ್ರಾಮದಲ್ಲಿ ಮತ ಚಲಾಯಿಸಿ ಮಾತನಾಡಿದರು. ಯಾರು ಉದಾಸೀನ ಮಾಡದೆ ಮತ ಚಲಾಯಿಸಿದರೆ ದೇಶದ ಅಭಿವೃದ್ದಿಯಲ್ಲಿ ಕೈಜೋಡಿಸಿದಂತೆ ಎಂದರು.
ಮತ ಚಲಾಯಿಸಿ ಭಾರತ ವೈಭವ ದಿನಪತ್ರಿಕೆ ಮತ್ತು ಬಿವಿ ನ್ಯೂಸ್ ಚನಲ್ ನ ಸಂಪಾದಕರಾದ ಡಾ. ಎನ್ ಪ್ರಶಾಂತರಾವ್ ಮಾತನಾಡಿ, ನಮ್ಮ ಸಂವಿಧಾನ ನಮಗೆ ಮತ ಚಲಾಯಿಸುವ ಮಹತ್ವದ ಹಕ್ಕನ್ನು ನಿಡಿದೆ. ನಮ್ಮ ದೇಶದ ಆಡಳಿತವನ್ನು ನಿರ್ಧರಿಸುವ ಅಧೀಕಾರವನ್ನು ದೇಶದ ಪ್ರಜೆಗಳಿಗೆ ನೀಡಿದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಇರುವ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಸಿಗುವುದು ಪ್ರತಿಯೊಬ್ಬರು ಮತಚಾಲಾಯಿಸಿದಾಗ. ಹನಿ ಹನಿ ಸೇರಿ ಹಳ್ಳ ಎಂಬಂತೆ ದೇಶದ ಏಳಿಗೆಗೆ ಪ್ರತಿಯೊಬ್ಬರ ಮತ ಬಹುಮುಖ್ಯ. ಪ್ರತಿಯೊಬ್ಬರು ತಮ್ಮ ಅಮೂಲ್ಯವಾದ ಮತ ವ್ಯರ್ಥಮಾಡದೆ ದೇಶದ ಭವಿಷ್ಯಕ್ಕಾಗಿ ಮತ ಚಲಾಯಿಸಿ ಎಂದರು.