ನಿಪ್ಪಾಣಿ : ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯಿಂದ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು 14 ಹಾಗೂ 15 ಹಣಕಾಸಿನ ಯೋಜನೆ ಅಡಿ ಶೌಚಾಲಯ ನಿರ್ಮಾಣ, ಸಿಸಿ ರಸ್ತೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಪವರ್ ಬ್ಲಾಕ್ ಅಳವಡಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ನೋಡಲಾಗದೆ ಹೊಟ್ಟೆ ಉರಿಯಿಂದ ವಿರೋಧಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ಆರೋಪದಲ್ಲಿ ಯಾವುದೇ ಹುರಳಿಲ್ಲ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜು ಖಿಚಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುದೀಪ ಉಗಳೇ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಅಲಂಕಾರ ಉಪಾಧ್ಯಕ್ಷ ಕಿರಣ್ ಟಾಕಳೆ ಮಾತನಾಡಿ ನಾವು ಯಾವತ್ತೂ ವಿರೋಧ ಪಕ್ಷದವರ ಅಭಿವೃದ್ಧಿ ಕಾಮಗಾರಿಗೆ ಅಡ್ಡಿ ಮಾಡಿಲ್ಲ ಗ್ರಾಮದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದ್ದು ಕುಣಿಯಲು ಬಾರದಕ್ಕೆ ನೆಲ ಡೊಂಕು ಎನ್ನುವಂತೆ ವಿರೋಧಕರು ವರ್ತಿಸುತ್ತಿದ್ದಾರೆ ಎಂದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸುಭಾಷ ಠಕಾನೆ ರಾಹುಲ್ ರತ್ನಾಕರ್ ನಿವದೂತ ಧನಗರ ಸ್ವಾತಿ ಕಾಂಬಳೆ ವೀರಶ್ರೀ ಖಿಚಡೆ ರಸಿದಾ ಪಟೇಲ್ ಸುಜಾತ ವಡ್ಡರ ಮಂಗಲಾ ಡಾಂಗೆ ಜ್ಯೋತಿಬಾ ಅಲಂಕಾರ ಮಹಾ ದೇವ ಡಾಂಗೆ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ವರದಿ:ಮಹಾವೀರ ಚಿಂಚಣೆ