Ad imageAd image

ಚಿಕ್ಕೋಡಿ ಲೋಕಸಭಾ ಆಖಾಡಕ್ಕೆ ಮಾಜಿ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಎಂಟ್ರಿ

Bharath Vaibhav
WhatsApp Group Join Now
Telegram Group Join Now

ಚಿಕ್ಕೋಡಿ: ಲೋಕಸಭಾ ಚುನಾವಣೆ ಹಿನ್ನೆಲೆ, ಮಾಜಿ ಐಎಎಸ್ ಅಧಿಕಾರಿ 2024ರ ರಾಯಬಾಗ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಂಭು ಕಲ್ಲೋಳಿಕರ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಿರಿಯ ನಿವೃತ್ತ ಐಎಎಸ್ ಅಧಿಕಾರಿಗೆ ಬಾರಿ ಜನ ಬೆಂಬಲ ಕೂಡ ವ್ಯಕ್ತವಾಗುತ್ತಿದೆ ಹಾಗಾಗಿ ರಾಷ್ಟ್ರೀಯ ಪಕ್ಷಗಳಿಗೆ ಈಗಾಗಲೇ ಶಂಬು ಕಲ್ಲೋಳ್ಕರ್ ತಲೆ ನೋವಾಗಿ ಕಾಡುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಜಯದ ಅಂಚಿನಲ್ಲಿ ಸೋಲನ್ನ ಕಂಡ ಶಂಭು ಕಲ್ಲೋಳಿಕರ್ ಹಟಕ್ಕೆ ಬಿದ್ದ ಘಟಸರ್ಪದಂತೆ ಜಾಣ ನಡೆಯನ್ನೇ ಅನುಸರಿಸುತ್ತಿದ್ದಾರೆ.

ಇದುವರೆಗೆ ಯಾವ ಗುಟ್ಟನ್ನು ಬಿಟ್ಟಕೊಡದ ಶಂಭು ಕಲ್ಲೋಳಿಕರ್, ಚಿಕ್ಕೋಡಿ ಲೋಕಸಭಾ ವ್ಯಾಪ್ತಿಗೆ ಬರುವ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ, ವಿಚಾರವಾದಿಗಳನ್ನು,ರಾಜಕಯ ಚಿಂತಕರನ್ನು, ಹಾಗೂ ಎಲ್ಲಾ ಪ್ರಜ್ಞಾವಂತ ಮತದಾರರ ಮನಸ್ಸನ್ನು ಸೆಳೆಯುವಲ್ಲಿ, ಯಶಸ್ಸು ಆಗುತ್ತಿದ್ದಾರೆ.

ಇನ್ನು ಕಲ್ಲೋಳಿಕರ ಅಭಿಮಾನಿಗಳು ದಿನದಿಂದ ದಿನಕ್ಕೆ, ಹೆಚ್ಚಾಗುತ್ತಿರುವ ಹಿನ್ನೆಲೆ, ರಾಷ್ಟ್ರೀಯ ಪಕ್ಷಗಳಿಗೆ ನಿದ್ದೆಗೆಡುವಂತೆ ಮಾಡಿದೆ ಕಲ್ಲೋಳಿಕರ ಎಂದರೆ ಜನರಲ್ಲಿ ಅಪಾರ ಪ್ರೀತಿ ಮತ್ತು ಅವರ ಮೃದು ಮುಗ್ಧ ಸ್ವಭಾವಕ್ಕೆ ಜನರು ಕೂಡ ಅದೇ ರೀತಿ ಸ್ಪಂದನೆ ನೀಡುತ್ತಿದ್ದಾರೆ.

ನಿನ್ನೆ ನಾಮಪತ್ರ ಸಲ್ಲಿಸಲು ಕೇವಲ ಐದು ಜನರೊಂದಿಗೆ ತೆರಳಿ ನಾಮಪತ್ರ ಸರಿಸಿದ್ದಾರೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಂಭು ಕಲ್ಲೋಳಿಕರ ಪ್ರಜ್ಞಾವಂತ ಮತದಾರರು ನನ್ನ ಕೈ ಹಿಡಿಯುತ್ತಾರೆ ಎಂಬುದು ನನಗೆ ವಿಶ್ವಾಸವಿದೆ ಜನರು ಎಲ್ಲವನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾರೆ ನಮ್ಮ ಕ್ಷೇತ್ರದಲ್ಲಿ ಯಾವ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಸರಿಹೋಗುತ್ತದೆ.

ಅದು ಏನೇ ಆಗಿರಲಿ ಕ್ಷೇತ್ರದ ಸರ್ವಾಂಗಿನ ಅಭಿವೃದ್ಧಿಗೆ,ಮತದಾರರು ಒಳ್ಳೆಯ ನಾಯಕನನ್ನು ಆಯ್ಕೆ ಮಾಡಬೇಕಾಗಿದೆ ಎಂದು ಹೇಳಿದರು.
ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!