Ad imageAd image

ಬಿಜೆಪಿ ಅವಧಿಯ ಘೋರ ದುರಂತದ ಪಟ್ಟಿ ಕೊಡ್ತೀವಿ: ಮಾಜಿ ಸಂಸದ ಡಿ.ಕೆ.ಸುರೇಶ್

Bharath Vaibhav
ಬಿಜೆಪಿ ಅವಧಿಯ ಘೋರ ದುರಂತದ ಪಟ್ಟಿ ಕೊಡ್ತೀವಿ: ಮಾಜಿ ಸಂಸದ ಡಿ.ಕೆ.ಸುರೇಶ್
WhatsApp Group Join Now
Telegram Group Join Now

ಬೆಂಗಳೂರು: ಆರ್ ಸಿಬಿ ಗೆದ್ದ ಬಳಿಕ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಂಡದ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಟೀಟ್ ಮಾಡಿದ್ದರು. ಆದರೆ ಇಂದು ವರಸೆ ಬದಲಾಯಿಸಿದ್ದಾರೆ, ಬಿಜೆಪಿ ಯಟರ್ನ್ ಮಾಡುವುದು ಹೊಸದೇನಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತವಾಡಿದ ಡಿ.ಕೆ.ಸುರೇಶ್, ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳು ಮೆರವಣಿಗೆಗೆ ಒತ್ತಾಯ ಮಾಡಿದ್ದರು. ಕ್ರೀಡಾ ಅಭಿಮಾನಿಗಳಿಗೆ ಅವಮಾನ ಮಾಡುತ್ತಿದ್ದೀರಿ, ನಿಮಗೆ ಮೆರವಣಿಗೆ ನಡೆಸಲು ಆಗುವುದಿಲ್ಲವೆ ಎಂದು ಹೇಳಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯವರು ಇದೇ ಪ್ರವೃತ್ತಿ ಹೊಂದಿದ್ದಾರೆ. ಜನ ಅವರಿಗೆ ಬಹುಮತ ನೀಡಿಲ್ಲ. ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿ ಆಗಿರುವ ಘೋರ ದುರಂತಗಳ ಪಟ್ಟಿ ನೀಡುತ್ತೇವೆ. ಬಿಜೆಪಿ ವಾಯುಕರಿಗೆ ನೈತಿಕತೆ ಇದ್ದರೆ ಅವರು ಮೊದಲು ರಾಜಿನಾಮೆ ವೀಡಲಿ ಎಂದು ಆಗ್ರಹಿಸಿದರು.

ಮುಂಬೈ ದಾಳಿಯಾದಾಗ ಮನಮೋಹನ್ ಸಿಂಗ್‌ ಅವರು ರಾಜಿನಾಮೆ ನೀಡಿದೃದೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಈ ಘಟನ ನಂತರ ವಿಳಾಸ್ ರಾವ್ ದೇಕಬ್‌ ಅವರು ರಾಜಿನಾಮೆ ನೀಡಿದ್ದರು. ಇದನ್ನು ಕುಮಾರಸ್ವಾಮಿ ಅವರು ಮರೆತು ಹೋಗಿದ್ದಾರೆ, ಇವರಿಗೆ ಡಿ.ಕೆ.ಶಿವಕುಮಾರ್ ಅವರನ್ನು ನೆನಪಿಸಿಕೊಳ್ಳದ ಊಟ, ನಿದ್ಯ ಏನ ಆಗುವುದಿಲ್ಲ, ಅವರು ಮೊದಲು ಆರೋಗ್ಯದ ಬಗ್ಗೆ ಗಮನವಿರಲಿ, ಈ ರಾಷ್ಟ್ರದ ಜನರ ಸೇವೆ ಮಾಡಲಿ ಎಂದು ಮನವಿ ಮಾಡುತ್ತೇವೆ ಎಂದರು. ನನ್ನ ಆರೋಗ್ಯವನ್ನು ದೇವರು ನೋಡಿಕೊಳ್ಳುತ್ತಾನೆ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆಯೂ ರಾಂಗ್ ನೀಡಿದ ಡಿ.ಕೆ.ಸುರೇಶ್‌, ಎಲ್ಲರ ಆರೋಗ್ಯವನ್ನು ದೇವರೇ ನೋಡಿಕೊಳ್ಳುವುದು, ಮಂಡ್ಯದ ಜನರ ಆಶೀರ್ವಾದ ಇರಬಹುದು ಕರ್ನಾಟಕದ ಜನರ ಹಾರೈಕ ಅಲ್ಲವಲ್ಲ. ಅವರು ಖುಷಿಯಾಗಿದ್ದರೆ ನಮಗೆ ಸಂತೋಷ ಎಂದು ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!