ಚಿಟಗುಪ್ಪ: ತಾಲೂಕಿನ ಮನ್ನಾಏಖೇಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಕೇಕ್ ಕತ್ತರಿಸುವ ಮೂಲಕ ಮಾಜಿ ಶಾಸಕ ಅಶೋಕ್ ಖೇಣಿ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ ಮಾತನಾಡಿ, ಅಶೋಕ್ ಖೇಣಿ ಅಪರೂಪದ ರಾಜಕಾರಣಿ,ಯಾವುದೇ ಜಾತಿ ಧರ್ಮ ಭೇದ ಎನ್ನದೆ ಎಲ್ಲರನ್ನ ಸಮನಾಗಿ ಜೊತೆಗೂಡಿಸಿ ಅಭಿವೃದ್ಧಿವೊಂದೇ ನನ್ನ ಮಂತ್ರ ಎಂಬಂತೆ ಕೆಲಸ ಮಾಡುತ್ತಾ ಬಂದಿದ್ದಾರೆ.

ಇಂತಹ ವ್ಯಕ್ತಿತ್ವ ಹೊಂದಿರುವ ಅಶೋಕ್ ಖೇಣಿ ಅವರನ್ನು ದೇವರು ಇನ್ನೂ ಹೆಚ್ಚಿನ ಆರೋಗ್ಯ ಕೊಟ್ಟು ಕಾಪಾಡಲಿ.ಹಾಗೂ ಈ ಕ್ಷೇತ್ರದಲ್ಲಿ ಮತ್ತೆ ಅಶೋಕ ಖೇಣಿ ಗೆದ್ದು ಬರಲಿ, ಅದಕ್ಕೆ ನಾವು ಕೂಡಿ ಶ್ರಮಿಸೋಣ ಎಂದು ಹೇಳಿದರು.
ಬೀದರ್ ಜಿಲ್ಲೆಯ ಸಣ್ಣ ಗ್ರಾಮದಲ್ಲಿ ಹುಟ್ಟಿ ಇಂದು ದೇಶ,ವಿದೇಶದಲ್ಲಿ ಹೆಸರು ಮಾಡಿರುವಂತಹ ಅಶೋಕ್ ಖೇಣಿಯವರು ಬೀದರ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ಸಣ್ಣ ಪುಟ್ಟ ತಪ್ಪಿನಿಂದ ಅಶೋಕ ಖೇಣಿ ಸೋಲು ಅನುಭವಿಸಬೇಕಾಯಿತು.ಬರುವ ದಿನಗಳಲ್ಲಿ ಮತ್ತೆ ಅಶೋಕ ಖೇಣಿ ಕೈ ಬಲಪಡಿಸಲು ನಾವೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸೋಣ ಎಂದು ಕೆಲ ಮುಖಂಡರು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ತನ್ವೀರ್ ಅಹ್ಮದ್ ಖಾನ್,ಸುನೀಲ್ ಖಾಶೆಂಪೂರ, ಯುಸುಫ್ ದಾದಾ,ಅಮ್ರತರಾವ ಪಾಟೀಲ್ ,ಸೈಯದ್ ಇಕರಮೋದ್ದೀನ್ ಹವಾಲ್ದಾರ್, ಸೈಯದ್ ಸಲಾಂಪಾಶ್ ಹವಾಲ್ದಾರ್, ಸೈಯದ್ ಖೈರೋದ್ದಿನ್ ಹವಾಲ್ದಾರ್, ತನ್ನವೀರ್ ಸೇಠ್, ಮಹೇಬೂಬ್ ಚಾಂಗಲೇರಾ,ಸಮೀಯೋದ್ದಿನ್ ಹವಾಲ್ದಾರ್,ಖುದ್ದುಸ್ ನಾಗನಕೇರಾ,ಆಸ್ಕರ್ ಫರ್ನಾಂಡೀಸ್, ಮಹಮ್ಮದ್ ಮಸ್ತಾನ್, ಗೌತಮ್ ಬಗದಲಕರ್,ಬಸಿರೋದ್ದಿನ್ ಬಗದಲ, ವೈಜಿನಾಥ ಕಟ್ಟಿಮನಿ, ಭಾಸ್ಕರ್ ಸುಭಾಷ ಅರಡಿ,ವೀರಪ್ಪ ಪೂಜಾರಿ, ನಾಸೀರೋದ್ದಿನ್,ಎಂಡಿ ನೂರ ಬಂಬುಳಗಿ, ಜಾವೀದರ್ ಮನ್ನಾಏಖ್ಖೇಳಿ,ಮುಖೀಮ್ ಬಂಬುಳಗಿ,ಶೀವಕುಮಾರ್ ಮುತ್ತಂಗಿ, ವಾಹಿದಲೀ,ಬಸವರಾಜ ರಾಜಗೀರಾ,ಜಯಪ್ರಕಾಶ್,ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವರದಿ:ಸಜೀಶ ಲಂಬುನೋರ್




