ಬೆಂಗಳೂರು: ಕಾಂಗ್ರೆಸ್ ಪಕ್ಷ ಭೂತ್ ಮಟ್ಟದಿಂದ ಸಂಘಟನೆ ಮಾಡಬೇಕು ಮತ್ತು ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಆರ್ ಮಂಜುನಾಥ್ ಹೇಳಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನಾಗಸಂದ್ರ ಮೇಟ್ರೊ ಸ್ಟೇಶನ್ ಹತ್ತಿರ ಇರುವ ಮಾಜಿ ಶಾಸಕ ಆರ್ ಮಂಜುನಾಥ್ ಅವರ ಕಚೇರಿಯಲ್ಲಿ ಕ್ಷೇತ್ರದ ಮುಖಂಡರ ಕಾರ್ಯಕರ್ತರ ಮಹತ್ವದ ಸಭೆಯನ್ನು ಮಾಜಿ ಶಾಸಕ ಆರ್ ಮಂಜುನಾಥ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆ ಉದ್ದೇಶಿಸಿ ಮಾತನಾಡಿದ ಅವರು ಬ್ಲಾಕ್ ಅಧ್ಯಕ್ಷರು ವಾರ್ಡ ಅಧ್ಯಕ್ಷರು ಮತ್ತು ವಿವಿಧ ಘಟಕಗಳ ಮುಖಂಡರು ಸರ್ಕಾರ ಯೋಜನೆಗಳ ಬಗ್ಗೆ ಪ್ರತಿಯೋಬ್ಬರಿಗೂ ತಲುಪುತ್ತಿದೆ ಇಲ್ಲ ವಿಚಾರಿಸಿ ನಮ್ಮ ಪಕ್ಷದ ಬಗ್ಗೆ ತಿಳಿಸಬೇಕು ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಾಜೀದ್ ಸಂಘಟನೆ ಬಗ್ಗೆ ಸಲಹೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಕೆ.ನಾಗಭೂಷಣ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಸಿ ವೆಂಕಟೇಶ್ ದೇವೇಗೌಡ, ಮಾಜಿ ಪಾಲಿಕೆ ಸದಸ್ಯ ಕೆ.ನಾಗಭೂಷಣ್, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಭಾಸ್ಕರ್ ಆಚಾರಿ, ಡಾ. ಮಂಜಣ್ಣ ಎಬಿಬಿ,ಹೆಗ್ಗನಹಳ್ಳಿ ಬ್ಲಾಕ್ ಅಧ್ಯಕ್ಷ ರಂಗಸ್ವಾಮಿ, ಚೊಕ್ಕಸಂದ್ರ ಬ್ಲಾಕ್ ಅಧ್ಯಕ್ಷ ರವಿ ಕುಮಾರ್, ಕುಮಾರ್ ಸಿಂಗ್, ಅನುಭವ ಜಗದೀಶ್, ಮೃತ್ಯುಂಜಯ ಗೌಡ, ರಾಮಚಂದ್ರ ವಿಶ್ವಕರ್ಮ, ರಾಮಾಂಜನೇಯ, ಗೋವಿಂದರಾಜು, ಮಹಾಂತೇಶ್ ಗೌಡ, ಸತೀಶ್ ಚಂದ್ರ ಸೇರಿದಂತೆ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




