ರಾಯಚೂರು :ಬೇಸಿಗೆ ಹಿನ್ನೆಲೆ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಹಾಹಾಕಾರ
ಪುರಸಭೆಯ ಆಯವ್ಯಯ ಸಭೆ ತೊರೆದು ಪ್ರತಿಭಟನೆಗಿಳಿದ ಪುರಸಭೆ ಮಾಜಿ ಅಧ್ಯಕ್ಷೆ
ರಾಯಚೂರು ಜಿಲ್ಲೆಯ ಮಾನವಿ ಪುರಸಭೆಯಲ್ಲಿ ಘಟನೆ
ವಾರ್ಡ್ ನಂಬರ್ 11ರ ಸದಸ್ಯೆ ಸುಫಿಯಾ ಬೇಗಂ ನೀರಿಗಾಗಿ ಏಕಾಂಗಿ ಹೋರಾಟ
ಕುಡಿಯುವ ನೀರಿಗಾಗಿ ಅಧಿಕಾರಿಗಳ ಮುಂದೆ ಕಣ್ಣೀರು ಸುರಿಸಿದ ಮಾಜಿ ಅಧ್ಯಕ್ಷೆ
2025-26ನೇ ಸಾಲಿನ ಆಯವ್ಯಯ ಕುರಿತು ಪುರಸಭೆಯಲ್ಲಿ ಸಭೆಯ ಕರೆಯಲಾಗಿತ್ತು.
ಈ ವೇಳೆ ಸಭೆ ತೊರೆದು ಪುರಸಭೆ ಅಧಿಕಾರಿಗಳ ಮುಂದೆ ಕುಡಿಯಲು ನೀರು ಕೊಡಿ ಎಂದು ಮಹಿಳಾ ಸದಸ್ಯೆ ಕಣ್ಣೀರು
ನಮ್ಮ ವಾರ್ಡ್ ನ ಜನ ನೀರಿಗಾಗಿ ಪರಿತಬ್ಬಿಸುತ್ತಿದ್ದಾರೆ.
ನಿತ್ಯ ನೀರಿಗಾಗಿ ಹಾಹಾಕಾರ ಪಡುವಂತ ಹೀನಾ ಸ್ಥಿತಿ ನಿರ್ಮಾಣವಾಗಿದೆ
ಹಲವು ಬಾರಿ ಮನವಿ ಮಾಡಿಕೊಂಡ್ರೂ ನೀರು ಪೂರೈಕೆ ಮಾಡಲು ಆಗುತ್ತಿಲ್ಲ
ನಮ್ಮನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದ ಜನರಿಗೆ ನೀರು ಕೊಡಿಸಲು ಆಗುತ್ತಿಲ ಎಂದ ಮೇಲೆ ಈ ಸಭೆ ಯಾಕೇ ಬೇಕು? ಎಂದು ಕಿಡಿ
ತಕ್ಷಣ ನಮ್ಮ ವಾರ್ಡ್ ಗೆ ನೀರು ಹರಿಸಿ ಜನರ ಹಿತಕಾಪಾಡಬೇಕೆಂದು ಮಹಿಳೆ ಪಟ್ಟು
ಅಧಿಕಾರಿಗಳು ಮನವೊಲಿಸಿದರು ಬಿಡದ ಪಟ್ಟು ಏಕಾಂಗಿ ಹೋರಾಟ ಮಾಡಿದ ಮಹಿಳೆ.
ವರದಿ:ಗಾರಲದಿನ್ನಿ ವೀರನ ಗೌಡ