ಅಹ್ಮದಾಬಾದ್: ಆರ್ ಸಿಬಿ ಬಹು ವರ್ಷಗಳ ನಂತರ ಐಪಿಎಲ್ ಕಪ್ ಗೆದ್ದಿದೆ. ಈ ಸಂಭ್ರಮದಲ್ಲಿ ಭಾಗಿಯಾಗಲು ಆರ್ ಸಿಬಿಯ ಮಾಜಿ ಆಟಗಾರರಾದ ಕ್ರಿಸ್ ಗೇಲ್, ಎಬಿದಿ ವಿಲಿಯರ್ಸ್ ಕೂಡ ಭಾಗಿಯಾಗಿದ್ದರು. ತಮ್ಮ ಕಾಲಾವಧಿಯಲ್ಲಿ ಕಪ್ ಗೆಲ್ಲಲಾಗದಿದ್ದರೂ ಕೊನೆಗೂ ತಾವಾಡಿದ ತಂಡ ಕಪ್ ಗೆದ್ದಿತಲ್ಲ ಎಂಬ ಸಂತಸ ಅವರ ಮೊಗದಲ್ಲಿ ಕಾಣಿಸುತ್ತಿತ್ತು.




