ಮಾನ್ವಿ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ 92ನೇ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ತಾಲೂಕು ಜೆಡಿಎಸ್ ಪಕ್ಷ ದ ವತಿಯಿಂದ ತಾಲೂಕ ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆ ರೋಗಿಗಳಿಗೆ ಹಣ್ಣು-ಹಂಂಪಲು ಬ್ರೆಡ್ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ರವರು ದೇಶದ 11ನೇ ಪ್ರಧಾನಿಯಾಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ನಾಡಿಗೆ ಕೀರ್ತಿಯನ್ನು ತಂದುಕೊಟ್ಟವರು ಹೆಚ್.ಡಿ.ದೇವೇಗೌಡರು. ಇವರ ಆಡಳಿತದ ಕಡಿಮೆ ಅವಧಿಯಲ್ಲಿಯೂ ಯಾವುದೇ ಭ್ರಷ್ಟಾಚಾರವಿಲ್ಲದೇ ದೇಶದ ಏಳಿಗೆಗೆ ಶ್ರಮಸಿದರು. ರಾಜ್ಯದ ಅಭಿವೃದ್ದಿ ದೃಷ್ಠಿಯಿಂದ ಯಾವುದೇ ಸಮಸ್ಯೆಗಳು ಬಂದರೂ ಹೋರಾಟ ಮಾಡಿ ರಾಜ್ಯದ ಚಿಂತನೆ ಮಾಡುವವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕ ಅಧ್ಯಕ್ಷರಾದ ಈರಣ್ಣ ಮರ್ಲಟ್ಟಿ, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ, ಮಹಿಳಾ ಘಟಕದ ಅಧ್ಯಕ್ಷೆ ಸರ್ವಮಂಗಳ, ಪುರಸಭೆ ಸದಸ್ಯರಾದ ಶರಣಪ್ಪ ಮೇದ, ವಕ್ತಾರರಾದ ನಾಗರಾಜ ಭೋಗಾವತಿ, ಮುಖಂಡರಾದ ಶೌಕತ್ ಅಲಿ, ಎಸ್.ಯಂಕೋಬ, ಸುಬಾನ್ ಬೇಗ್, ಹೆಚ್.ಮೌನೇಶ ಗೌಡ, ಬಸವರಾಜ ಶೆಟ್ಟಿ, ಮೌಲ ಸಾಬ್, ಯಲ್ಲಪ್ಪ ನಾಯಕ ಮುಸ್ಟೂರು, ರಜನಿಕಾಂತ್ ಗೌಡ, ಸಾಜಿದ್ ಪಾಷಾ, ವೀರೇಶ ಬಡಿಗೇರ, ಶಿವಕುಮಾರ್, ನಾಗರಾಜ ಪೆರಕಲ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಆಸ್ಪತ್ರೆ ಸಿಬ್ಬಂದಿ ಇದ್ದರು.




