ಕಿತ್ತೂರು: ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ ನಲ್ಲಿ ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮದ ಮಾಜಿ ಸೈನಿಕ ಅಡವಯ್ಯ ಬಸಯ್ಯ ದೊಡ್ಡಯ್ಯನವರ್ ಎಂಬ ಮಾಜಿ ಸೈನಿಕ ವಿವಿಧ ಬಾಂಡ್ ಗಳಲ್ಲಿ ಒಟ್ಟು 4 ಲಕ್ಷಕ್ಕೂ ಹೆಚ್ಚು ಹಣವನ್ನು ಠೇವಣಿ ಇಟ್ಟು ಅವಧಿ ಮುಗಿದರೂ ಠೇವಣಿ ಹಣ ಮತ್ತು ಬಡ್ಡಿ ಯನ್ನು ಕೊಡದೇ ಬ್ಯಾಂಕಿನವರು ಸತಾಯಿಸಿ ವಾಪಸ್ ಕಳಿಸಿರುವ ಘಟನೆಯಿಂದ ಬೇಸತ್ತು, ಬೆಳಗಾವಿ ಜಿಲ್ಲಾಧಿಕಾರಿಗಳ ಮೊರೆ ಹೋಗಿ dc ಕಚೇರಿ ಆವರಣದಲ್ಲಿ ಮಾಜಿ ಸೈನಿಕ ಧರಣಿ ಕೂತ ಘಟನೆ ನಡೆದು dc ಗೇ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರೊಂದಿಗೆ ಮಾತನಾಡಿದ ಮಾಜಿ ಸೈನಿಕ ಅಡವಯ್ಯ ದೊಡ್ಡಯ್ಯನವರ್ ನಮಗೆ ಹಣಕಾಸಿನ ತುಂಬಾ ತೊಂದರೆಯಾಗುತ್ತಿದ್ದು ನಮಗೆ ಠೇವಣಿ ಹಣವನ್ನು ಮರು ಪಾವತಿ ಮಾಡಬೇಕು ಎಂದು ಮಾಡಬೇಕು ಎಂದು ಮನವಿ ಮಾಡಿದ್ದಾರೆ.