Ad imageAd image

ಬಿಜೆಪಿ ಸೇರ್ಪಡೆಯಾದ ಮಾಜಿ ಟೆನ್ನಿಸ್ ದಿಗ್ಗಜ ಲಿಯಾಂಡರ್ ಪೇಸ್

Bharath Vaibhav
ಬಿಜೆಪಿ ಸೇರ್ಪಡೆಯಾದ ಮಾಜಿ ಟೆನ್ನಿಸ್ ದಿಗ್ಗಜ ಲಿಯಾಂಡರ್ ಪೇಸ್
WhatsApp Group Join Now
Telegram Group Join Now

ನವದೆಹಲಿ : ಮಾಜಿ ಟೆನ್ನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಭಾರತದ ಖ್ಯಾತ ಟೆನ್ನಿಸ್ ದಿಗ್ಗಜ ಮತ್ತು ಒಲಿಂಪಿಕ್ ಪದಕ ವಿಜೇತ ಲಿಯಾಂಡರ್ ಪೇಸ್ ಅವರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕೇಂದ್ರ ಸರ್ಕಾರದ ಕ್ರೀಡಾ ಯೋಜನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪೇಸ್, “ಕಳೆದ 40 ವರ್ಷಗಳ ಕಾಲ ಟೆನ್ನಿಸ್ ಕೋರ್ಟ್‌ನಲ್ಲಿ ದೇಶಕ್ಕಾಗಿ ಆಡಿದ್ದೇನೆ, ಇನ್ನು ಮುಂದೆ ಕ್ರೀಡಾ ಶಿಕ್ಷಣ ಮತ್ತು ಯುವಜನತೆಯ ಸೇವೆಗಾಗಿ ರಾಜಕೀಯ ಅಖಾಡದಲ್ಲಿ ಕೆಲಸ ಮಾಡುವೆ” ಎಂದು ಭಾವುಕರಾಗಿ ನುಡಿದರು. ಮಹಿಳಾ ಸಬಲೀಕರಣ ಮತ್ತು ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ ತಮ್ಮ ಮುಂದಿನ ಗುರಿ ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು.

“ಇದು ನನ್ನ ಜೀವನದ ಅತ್ಯಂತ ದೊಡ್ಡ ದಿನ. ನಾನು ಪ್ರಧಾನಿ ಮೋದಿ, ಅಮಿತ್ ಶಾ ಜಿ ಮತ್ತು ನಿತಿನ್ ನಬಿನ್ ಜಿ ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಕ್ರೀಡೆ ಮತ್ತು ಯುವಜನತೆಯ ಸೇವೆ ಮಾಡಲು ಇದು ನನಗೆ ಸಿಕ್ಕಿರುವ ದೊಡ್ಡ ಅವಕಾಶ. ನಾನು 40 ವರ್ಷಗಳ ಕಾಲ ದೇಶಕ್ಕಾಗಿ ಆಡಿದ್ದೇನೆ, ಈಗ ಯುವಜನತೆಯ ಸೇವೆ ಮಾಡುವ ಸಮಯ ಬಂದಿದೆ.

‘ಖೇಲೋ ಇಂಡಿಯಾ’ ಅಭಿಯಾನ ಮತ್ತು ‘ಟಾಪ್ಸ್’ (TOPS) ಯೋಜನೆಗಳು ನಿಜಕ್ಕೂ ಅದ್ಭುತವಾಗಿವೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಮ್ಮ ತಂಡದ ಪ್ರದರ್ಶನಕ್ಕಾಗಿ ಕಿರಣ್ ರಿಜಿಜು ಜಿ ಅವರು ಎಷ್ಟು ಉತ್ಸಾಹದಿಂದ ಕೆಲಸ ಮಾಡಿದ್ದಾರೆ ಎಂಬುದು ನನಗೆ ತಿಳಿದಿದೆ.

ಪ್ರಧಾನಿಯವರು ತಮಗೆ ನೀಡಿದ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಇಂದು ಭಾರತವು ವಿಶ್ವದ ಅತಿ ಕಿರಿಯ ರಾಷ್ಟ್ರವಾಗಿದೆ. ಮುಂದಿನ 20-25 ವರ್ಷಗಳಲ್ಲಿ ನಾವು ಕ್ರೀಡಾ ಶಿಕ್ಷಣದ ಮೇಲೆ ಹೆಚ್ಚಿನ ಗಮನ ಹರಿಸಬೇಕಿದೆ.

1986ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕ್ರೀಡಾ ಮೂಲಸೌಕರ್ಯಗಳು ಅಷ್ಟಾಗಿ ಇರಲಿಲ್ಲ. ಇಂದಿಗೂ ದೇಶದಲ್ಲಿ ಸರಿಯಾದ ಒಳಾಂಗಣ (Indoor) ಟೆನ್ನಿಸ್ ಕೋರ್ಟ್‌ಗಳಿಲ್ಲ. ಬಂಗಾಳ, ತಮಿಳುನಾಡು ಮತ್ತು ಬಿಹಾರ ರಾಜ್ಯಗಳು ಕ್ರೀಡೆಯಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಬಹುದು.

ಆದರೆ ಕ್ರೀಡಾ ಶಿಕ್ಷಣದ ಮೂಲಕ ಯುವಜನರನ್ನು ಪ್ರೇರೇಪಿಸುವ ಮತ್ತು ಸಬಲೀಕರಣಗೊಳಿಸುವತ್ತ ನಾವು ಗಮನಹರಿಸುವ ಅಗತ್ಯವಿದೆ. ಭಾರತದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಸಮಾನ ಅವಕಾಶದ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ತರುವುದು ನನ್ನ ಕನಸಾಗಿದೆ ಎಂದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!