ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಲ್ ಜೊತೆ ವಿಚ್ಛೇದನ ಪಡೆದ ದಿನವೇ ಮಾಜಿ ಪತ್ನಿ ಧನಶ್ರೀ ವರ್ಮ ನಟಿಸಿರುವ ಅನೈತಿಕ ಸಂಬಂಧದ ಕುರಿತ ಹಾಡೊಂದು ವೈರಲ್ ಆಗಿದೆ.
ಕಳೆದ ಕೆಲವು ದಿನಗಳಿಂದ ಪ್ರತ್ಯೇಕವಾಗಿದ್ದ ಚಹಲ್ ಮತ್ತು ಧನಶ್ರೀ ವರ್ಮಗೆ ನಿನ್ನೆ ಮುಂಬೈ ಫ್ಯಾಮಿಲಿ ಕೋರ್ಟ್ ಅಧಿಕೃತವಾಗಿ ವಿಚ್ಛೇದನ ನೀಡಿದೆ. ಧನಶ್ರೀಗೆ ಜೀವನಾಂಶವಾಗಿ ಚಹಲ್ 4.5 ಕೋಟಿ ರೂ. ಹಣವನ್ನೂ ನೀಡಿದ್ದಾರೆ.
ಇದೀಗ ವಿಚ್ಛೇದನ ಪಡೆದ ದಿನವೇ ಧನಶ್ರೀ ನಟಿಸಿರುವ ಹಾಡೊಂದು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಅನೈತಿಕ ಸಂಬಂಧದ ಬಗ್ಗೆ ಹೇಳಲಾಗಿದೆ. ಟಿ ಸೀರೀಸ್ ಯೂ ಟ್ಯೂಬ್ ನಲ್ಲಿ ಹಾಡು ಬಿಡುಗಡೆಯಾಗಿದೆ. ಹಾಡಿನ ಲಿಂಕ್, ಟಿ ಸೀರೀಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಕೆಲವು ಸತ್ಯಗಳು ತಾನಾಗಿಯೇ ಹೊರಬರುತ್ತವೆ, ಹಿಡಿದಿಟ್ಟುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಎಂದು ಅಡಿಬರಹವನ್ನೂ ಬರೆಯಲಾಗಿದೆ.
ಇದನ್ನು ನೋಡಿ ನೆಟ್ಟಿಗರು ಇದು ಚಹಲ್ ಗೆ ಟಾಂಗ್ ಕೊಡಲೆಂದೇ ಮಾಡಿರಬಹುದೇ ಎಂದು ಅನುಮಾನಿಸಿದ್ದಾರೆ. ಇತ್ತೀಚೆಗೆ ಧನಶ್ರೀಯಿಂದ ಬೇರ್ಪಟ್ಟ ಬಳಿಕ ಚಹಲ್ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಮೈದಾನದಲ್ಲಿ ಹೊಸ ಗೆಳತಿಯೊಂದಿಗೆ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಈ ಹಾಡು, ಅಡಿಬರಹ ಹಲವು ಅನುಮಾನ ಹುಟ್ಟಿಸುವಂತಿದೆ.
ಕ್ರಿಕೆಟಿಗ ಚಹಲಗೆ ಟಾಂಗ್ ಕೊಟ್ಟರೇ ಮಾಜಿ ಪತ್ನಿ ಧನಶ್ರೀ
