ಹುಬ್ಬಳ್ಳಿ :ಇನಾಂ ವೀರಾಪುರ ಗ್ರಾಮಕ್ಕೆ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಸ್ಥಾಪಕರಾದ ಮತ್ತಿನ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹುಸನಪ್ಪ ಚಲವಾದಿ ಭೇಟಿ ತಾಲ್ಲೂಕಿನ ಇನಾಮ್ ವೀರಾಪುರ ಗ್ರಾಮದಲ್ಲಿ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿಯಾದ ಮಾನ್ಯ ಪಾಟೀಲ ಅವರ ಅಮಾನವೀಯ ಮರ್ಯಾದೆ ಹತ್ಯೆ ನಾಗರಿಕ ಸಮಾಜದ ಮನಸ್ಸನ್ನು ಕಲುಷಿತಗೊಳಿಸಿದ ಭೀಕರ ಕೃತ್ಯವಾಗಿದೆ. ಈ ಕ್ರೂರ ಘಟನೆಗೆ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ತೀವ್ರ ಖಂಡನೆಯನ್ನು ವ್ಯಕ್ತಪಡಿಸುತ್ತದೆ.
ಇಂದು ಸಂತ್ರಸ್ತ ಕುಟುಂಬದ ಮನೆಗೆ ಭೇಟಿ ನೀಡಿ, ಅವರ ನೋವಿಗೆ ಸ್ಪಂದಿಸಿ ಸಾಂತ್ವನ ಹೇಳುವ ಮೂಲಕ ನೈತಿಕ ಬೆಂಬಲವನ್ನು ಸೂಚಿಸಲಾಯಿತು. ಈ ಸಂದರ್ಭದಲ್ಲಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ರಾಜ್ಯ ಸಂಸ್ಥಾಪಕರಾದ ಮತ್ತಿನ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹುಸನಪ್ಪ ಚಲವಾದಿ, ವಿಜಯಪುರ ಜಿಲ್ಲಾಧ್ಯಕ್ಷರಾದ ಮಾರುತಿ ಕುದುರಿ, ಜಮಖಂಡಿ ತಾಲೂಕ ಅಧ್ಯಕ್ಷರಾದ ಪುಂಡಲಿ ಕಾಂಬಳೆ ಸೇರಿದಂತೆ ಸಂಘಟನೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದು, ಸಂತ್ರಸ್ತ ಕುಟುಂಬದ ಜೊತೆ ನಿಲ್ಲುವ ಭರವಸೆಯನ್ನು ವ್ಯಕ್ತಪಡಿಸಿದರು.
ಮಾನವೀಯತೆ, ಸಮಾನತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಮೇಲೆ ನಡೆದ ಈ ದಾಳಿ ಕ್ಷಮಾರ್ಹವಲ್ಲ. ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಇಂತಹ ಅಮಾನವೀಯ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಮತ್ತು ಸಮಾಜ ಎಚ್ಚೆತ್ತುಕೊಳ್ಳಬೇಕು ಎಂಬುದು ನಮ್ಮ ದೃಢ ನಿಲುವಾಗಿದೆ.
ವರದಿ :ಗುರುರಾಜ ಹಂಚಾಟೆ




