Ad imageAd image

ವಿಚ್ಚೇದನತ್ತ ಸಾಗಿದೇಯೇ ನಾಲ್ಕು ತಿಂಗಳ ವೈವಾಹಿಕ ಸಂಬಂಧ?

Bharath Vaibhav
ವಿಚ್ಚೇದನತ್ತ ಸಾಗಿದೇಯೇ ನಾಲ್ಕು ತಿಂಗಳ ವೈವಾಹಿಕ ಸಂಬಂಧ?
WhatsApp Group Join Now
Telegram Group Join Now

ಮುಂಬೈ: ಬಾಲಿವುಡ್ ನಲ್ಲಿ ಮತ್ತೊಂದು ವಿವಾಹ ವಿಚ್ಚೇದನದತ್ತ ಸಾಗಿದ್ದು, ಈ ಬಾರಿ ಖ್ಯಾತ ಕಿರುತೆರೆ ನಟಿ ಅದಿತಿ ಶರ್ಮಾ (Aditi Sharma) ತಮ್ಮ ರಹಸ್ಯ ಮದುವೆಯನ್ನು ವಿಚ್ಚೇದನದಲ್ಲಿ ಅಂತ್ಯಗೊಳಿಸಲು ಮುಂದಾಗಿದ್ದಾರೆ.

ಹೌದು.. ಇತ್ತೀಚೆಗೆ ಯಜುವೇಂದ್ರ ಚಾಹಲ್ ಹಾಗೂ ಧನಶ್ರೀ ಡಿವೋರ್ಸ್‌ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಹಿಂದಿ ಚಿತ್ರರಂಗದಲ್ಲಿ ಮತ್ತೊಂದು ವಿಚಿತ್ರ ವಿವಾಹ ವಿಚ್ಛೇದನ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ಬಾಲಿವುಡ್ ನ ಖ್ಯಾತ ಕಿರುತೆರೆ ನಟಿ ಅದಿತಿ ಶರ್ಮಾ ಅವರು ಮದುವೆಯಾಗಿ ಕೇವಲ 4 ತಿಂಗಳುಗಳಲ್ಲೇ ಡಿವೋರ್ಸ್‌ ಪಡೆಯಲು ಮುಂದಾಗಿದ್ದಾರೆ.

ಈ ಹಿಂದೆ ಬಹುಕಾಲದ ಗೆಳೆಯ ಅಭಿನೀತ್‌ ಕೌಶಿಕ್‌ ಜೊತೆಗೆ ಅದಿತಿ ಶರ್ಮಾ ಗುಟ್ಟಾಗಿ ಮದುವೆಯಾಗಿದ್ದರು. ಈಗ ಡಿವೋರ್ಸ್‌ ಮೂಲಕ ಇವರ ಮದುವೆ ವಿಚಾರ ರಟ್ಟಾಗಿದೆ. ಮೂಲಗಳ ಪ್ರಕಾರ ನಟಿ ಅದಿತಿ ಶರ್ಮಾ ಹಾಗೂ ಅಭಿನೀತ್‌ ಇಬ್ಬರೂ ಪರಸ್ಪರ 2024 ನವೆಂಬರ್‌ 12 ರಂದು ಗುರಗಾಂವ್ ನಲ್ಲಿ ರಹಸ್ಯವಾಗಿ ವಿವಾಹವಾಗಿದ್ದರಂತೆ. ಮದುವೆ ವಿಚಾರ ಕರಿಯರ್‌ಗೆ ಸಮಸ್ಯೆ ಉಂಟುಮಾಡಬಾರದು ಎಂದು ಅವರು ಬಹಳ ಗುಟ್ಟಾಗಿ ಹಸೆಮಣೆ ಏರಿದ್ದರು.

ಅದಿತಿ ಅವರೇ ಈ ವಿಷಯವನ್ನು ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಆದರೆ ಇದೀಗ ಇದೇ ಅದಿತಿ ಶರ್ಮಾ ಸಹನಟನ ಜೊತೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಪತಿ ಡಿವೋರ್ಸ್‌ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಅದಿತಿ ಶರ್ಮಾ ಅವರ ಕುಟುಂಬವು 25 ಲಕ್ಷ ರೂಪಾಯಿ ಕೊಟ್ಟು ಸೆಟಲ್‌ಮೆಂಟ್‌ ಮಾಡಿಕೊಳ್ಳೋಣ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಡಿವೋರ್ಸ್‌ ಬಗ್ಗೆ ವಿಚಾರ ಬಂದಾಗ ಅದಿತಿ ವಕೀಲರು 25 ಲಕ್ಷ ರೂಪಾಯಿ ಕೊಟ್ಟುಸೆಟಲ್‌ಮೆಂಟ್‌ ಮಾಡೋಣ ಎಂದು ಹೇಳಿದ್ದಾರಂತೆ.

ನಾನು ಮದುವೆಗೆ ರೆಡಿ ಇರಲಿಲ್ಲ ಎಂದ ಪತಿ:  ಇನ್ನು “ಒಂದುವರೆ ವರ್ಷಗಳ ಹಿಂದೆ ಅದಿತಿ ಮದುವೆಯಾಗೋಣ ಎಂದಾಗ ನಾನು ರೆಡಿ ಇರಲಿಲ್ಲ. ಅದಿತಿ ತುಂಬ ಹೇಳಿದ್ಮೇಲೆ ನಾನು ಒಪ್ಪಿಕೊಂಡೆ. ಚಿತ್ರರಂಗದಲ್ಲಿ ಅವಕಾಶ ಸಿಗೋದಿಲ್ಲ ಎಂದು ಅವಳು ಮದುವೆಯಾಗಿರುವ ವಿಚಾರವನ್ನು ರಿವೀಲ್‌ ಮಾಡೋದು ಬೇಡ ಎಂದು ಹೇಳಿದ್ದಳು” ಎಂದು ಪತಿ ಅಭಿನೀತ ಹೇಳಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ವಕೀಲ ಲೀಗಲ್‌ ಕನ್ಸಲ್ಟಂಟ್‌ ರಾಕೇಶ್‌ ಶೆಟ್ಟಿ ಅವರು ಈ ಮದುವೆಯ ಫೋಟೋಗಳನ್ನು ಸೋಶಿಯಲ್‌ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ‘ವರ್ಷಗಳ ಕಾಲ ಈ ಜೋಡಿ ಲಿವ್‌ ಇನ್‌ರಿಲೇಶನ್‌ಶಿಪ್‌ನಲ್ಲಿತ್ತು. ಆಮೇಲೆ ಮದುವೆಯಾಗಿದ್ದು, 5BHK ಬಾಡಿಗೆ ಮನೆಯಲ್ಲಿ ಈ ಜೋಡಿ ಆರು ತಿಂಗಳುಗಳ ಕಾಲ ಸಂಸಾರ ಮಾಡಿದೆ ಎಂದಿದ್ದಾರೆ.

ಸಹನಟನ ಜೊತೆ ಅಕ್ರಮ ಸಂಬಂಧ? ಇನ್ನು ನಟಿ ಅದಿತಿ ಶರ್ಮಾ ಸಹನಟನ ಜೊತೆ ಅಕ್ರಮ ಸಂಬಂಧ ಎಂದೂ ಆರೋಪಿಸಲಾಗಿದ್ದು, ʼApollenaʼ ಧಾರಾವಾಹಿ ಸಹನಟ ಸಮರ್ಥ್ಯ ಜೊತೆ ಅದಿತಿ ಶರ್ಮಾ ಆತ್ಮೀಯತೆ ಜಾಸ್ತಿ ಆಗಿತ್ತು. ಇದು ಈ ಧಾರಾವಾಹಿ ನಿರ್ಮಾಪಕಿ ಕರೀಷ್ಮಾ ತಿಳಿದಿತ್ತು. ಸಮರ್ಥ್ಯ ಹಾಗೂ ಅದಿತಿ ಒಟ್ಟಿಗೆ ಇರೋದನ್ನು ಅದಿತಿ ಅವರ ಪತಿ ಅಭಿನೀತ್ ಕೂಡ ನೋಡಿದ್ದರು. ಆಮೇಲೆ ಗಂಡ-ಹೆಂಡತಿ ಮಧ್ಯೆ ಜಗಳ ಶುರು ಆಗಿದೆ” ಎಂದು ವಕೀಲ ರಾಕೇಶ್‌ ಶೆಟ್ಟಿ ಹೇಳಿದ್ದಾರೆ.

ಮದುವೆ ಟ್ರಯಲ್ಎಂದ ನಟಿ: ಅಭಿನೀತ್‌ ಅವರು ಈ ಬಗ್ಗೆ ಮತ್ತೆ ಮಾತನಾಡಿದ್ದು, “ಈ ಮದುವೆಯನ್ನು ಅದಿತಿ ತಿರಸ್ಕರಿಸಿದ್ದಾಳೆ, ಒಂದು ಟ್ರಯಲ್‌ ಆಗಿತ್ತು ಅಷ್ಟೇ, ಕಾನೂನಾತ್ಮಕವಲ್ಲ ಎಂದು ಹೇಳಿದ್ದಾರೆʼ ಎಂದು ಆರೋಪಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!