ಮಹಾರಾಷ್ಟ್ರ: ಇಂದು ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಈ ಅಪಘಾತದಲ್ಲಿ ಬೀದರ್ ಮೂಲದ ನಾಲ್ವರು ದುರ್ಮರಣ ಹೊಂದಿರುವಂತ ಘಟನೆ ನಡೆದಿದೆ.
ಬೀದರ್ ಮೂಲದ ಸ್ನೇಹಿತರು ಸ್ವಾಮೀಜಿ ದರ್ಶನಕ್ಕೆ ತೆರಳಿದ್ದರು. ಹುಲಜಂತಿ ಮಾಳಿಂಗರಾಯ್ ಸ್ವಾಮೀಜಿ ದರ್ಶನಕ್ಕೆ ತೆರಳಿದ್ದರು.ದರ್ಶನ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ.
ಕಾರು ಅಪಘಾತದಲ್ಲಿ ಬೀದರ್ ಮೂಲದ ನಾಲ್ವರು ದುರ್ಮರಣ ಹೊಂದಿದ್ದಾರೆ. ಇನ್ನೂ ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




