Ad imageAd image
- Advertisement -  - Advertisement -  - Advertisement - 

800 ಅಡಿ ಆಳದ ಕಂದಕಕ್ಕೆ ಉರುಳಿದ ಸೇನಾ ವಾಹನ : ನಾಲ್ವರು ಯೋಧರು ಹುತಾತ್ಮ

Bharath Vaibhav
800 ಅಡಿ ಆಳದ ಕಂದಕಕ್ಕೆ ಉರುಳಿದ ಸೇನಾ ವಾಹನ : ನಾಲ್ವರು ಯೋಧರು ಹುತಾತ್ಮ
WhatsApp Group Join Now
Telegram Group Join Now

ಗ್ಯಾಂಗ್ಟಾಕ್: ಸೇನಾ ವಾಹನವೊಂದು 800 ಅಡಿ ಆಳದ ಕಂದಕಕ್ಕೆ ಉರುಳಿ ನಾಲ್ವರು ಯೋಧರು ಹುತಾತ್ಮರಾಗಿರುವ ಆಘಾತಕಾರಿ ಘಟನೆ ಸಿಕ್ಕಿಂನ ಪಾಕ್ಯೋಂಗ್‌ ಜಿಲ್ಲೆಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಪೆಡಾಂಗ್‌ನಿಂದ ಸಿಕ್ಕಿಂನ ಜುಲುಕ್‌ಗೆ ಪ್ರಯಾಣಿಸುತ್ತಿದ್ದ ಸೇನಾ ವಾಹನ ಕಡಿದಾದ ಪರ್ವತ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ವಾಹನ ದಲೋಪ್‌ಚಂದ್‌ ದಾರಾ ಬಳಿ ಕಂದಕಕ್ಕೆ ಉರುಳಿದೆ. ಅವಘಡದಲ್ಲಿ ಕನಿಷ್ಠ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ ಎಲ್ಲಾ ಮೃತದೇಹಗಳನ್ನು ಹೊರತೆಗೆದಿದ್ದಾರೆ. ನಾಲ್ವರು ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತ ಯೋಧರನ್ನು ಮಧ್ಯಪ್ರದೇಶದ ಸೇನಾ ವಾಹನ ಚಾಲಕ ಪ್ರದೀಪ್‌ ಪಟೇಲ್‌, ಮಣಿಪುರದ ಕುಶಲಕರ್ಮಿ ಡಬ್ಲ್ಯು ಪೀಟರ್‌, ಹರಿಯಾಣದ ನಾಯಕ್‌ ಗುರ್ಸೇವ್‌ ಸಿಂಗ್‌ ಮತ್ತು ತಮಿಳುನಾಡಿನ ಸುಬೇದಾರ್‌ ಕೆ ಎಂದು ಗುರುತಿಸಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!