ಲಖನೌ: ಉತ್ತರ ಪ್ರದೇಶದಲ್ಲಿ ಭಾರಿ ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸಿದ್ದ ನಾಲ್ವರು ಶಂಕಿತ ಉಗ್ರರನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಬಂಧಿಸಿದ್ದಾರೆ.
ಸಾಕಿಬ್ ಸೇರಿದಂತೆ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಬಂಧಿತರನ್ನು ವಿಕಾಸ್ ಗೆಲ್ವಾತ್, ಪಪ್ಲಾ ಪಂಡಿತ್, ಸಾಕಿಬ್ ಅಲಿಯಾಸ್ ಡೆವಿಲ್ ಹಾಗೂ ಅರ್ಬಾಬ್ ಬಂಧಿತ ಶಂಕಿತರು.
ಬಂಧಿತರು ಪಾಕಿಸ್ತಾನ ಹಾಗೂ ದುಬೈನಲ್ಲಿರುವ ಜನರ ಸಂಪರ್ಕದಲ್ಲಿದ್ದರು. ಉತ್ತರ ಪ್ರದೇಶದ ಹಲವೆಡೆ ಭೀಕರ ಉಗ್ರರ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಲಖನೌದಲ್ಲಿ ಮೊದಲ ಪ್ರಮುಖ ದಾಳಿಗೆ ಪ್ಲಾನ್ ಮಾಡಿದ್ದರು. ಬಳಿಕ ಅಲಿಗಢ, ಗಾಜಿಯಾಬಾದ್ ಸೇರಿ ಹಲವು ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯೋಜನೆ ರೂಪಿಸಿದ್ದರು.
ಅಷ್ಟೇ ಅಲ್ಲ, ಲಖನೌ ರೈಲ್ವೆ ನಿಲ್ದಾಣದ ಮೇಲೂ ದಾಲಿಗೆ ಸಂಚು ರೂಪಿಸಿದ್ದರು. ಈ ನಿಟ್ಟಿನಲ್ಲಿ ಹಲವು ಬಾರಿ ಲಖನೌ ರೈಲು ನಿಲ್ದಾಣಕ್ಕೆ ಸಾಕಿಬ್ ಭೇಟಿ ನೀಡಿದ್ದ. ಈ ಸಂಬಂಧ ಸಾಕಿಬ್ ಆಡಿಯೋ ಮೆಸೇಜ್ ಗಳನ್ನು ಕಳುಹಿಸಿದ್ದ.
ದಕ್ಕೆ ಪೂರಕವಾಗಿ ಸಾಕಿಬ್ ಹಾಗೂ ಸ್ನೇಹಿತರ ಖಾತೆಗೆ ಹಣ ಸಂದಾಯವಾಗಿತ್ತು. ಹಣ ಸಂದಾಯ ಹಾಗೂ ದಾಳಿಯ ಸಂಚಿನ ಬಗ್ಗೆ ಎಟಿಎಸ್ ತನಿಖೆ ನಡೆಸುತ್ತಿದೆ. ಈ ನಡುವೆ ನಾಲ್ವರು ಶಂಕಿತ ಉಗ್ರರನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.




