Ad imageAd image

ಮಹಿಳೆಯರೊಂದಿಗಿನ ಅನುಚಿತ ರ‍್ತನೆ ಪ್ರಶ್ನಿಸಿದ್ದಕ್ಕೆ ಯುವ ಉದ್ಯಮಿ ಹಲ್ಲೆ: ನಾಲ್ವರು ಯುವಕರ ಬಂಧನ

Bharath Vaibhav
ಮಹಿಳೆಯರೊಂದಿಗಿನ ಅನುಚಿತ ರ‍್ತನೆ ಪ್ರಶ್ನಿಸಿದ್ದಕ್ಕೆ ಯುವ ಉದ್ಯಮಿ ಹಲ್ಲೆ: ನಾಲ್ವರು ಯುವಕರ ಬಂಧನ
Black woman in handcuffs
WhatsApp Group Join Now
Telegram Group Join Now

ನವದೆಹಲಿ: ಮಹಿಳೆಯರೊಂದಿಗೆ ಅಸಭ್ಯವಾಗಿ ರ‍್ತಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ ಕಾರಣಕ್ಕೆ ೨೬ ರ‍್ಷದ ಉದ್ಯಮಿ ಮೇಲೆ ಯುವಕರು ಹಲ್ಲೆ ಮಾಡಿರುವ ಘಟನೆ ದಕ್ಷಿಣ ದೆಹಲಿಯ ಮೇಹ್ರವಳಿಯಲ್ಲಿ ಸೋಮವಾರ ನಡೆದಿದೆ.
ಉದ್ಯಮಿಯನ್ನು ಬಡಿದು, ಗುದ್ದಿ, ಕಲ್ಲಿನಿಂದ ಹಲ್ಲೆ ಮಾಡಿದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಟ್ರಾನ್ಸಪರ‍್ಟ್ ಉದ್ಯಮ ಮಾಡಿಕೊಂಡು ಸಂಗಮ ವಿಹಾರದಲ್ಲಿ ತಮ್ಮ ಕುಟುಂಬದೊAದಿಗೆ ನೆಲೆಸಿದ್ದ ಮುಖೇಶ ಕುಮಾರ್ (೨೬) ಯುವಕರ ಗುಂಪಿನಿAದ ಹಲ್ಲೆಗೊಳಗಾದ ಯುವಕ.
ಸಂಬAಧಿಯೊಬ್ಬರ ಮದುವೆ ಸಮರಂಭದಲ್ಲಿ ಪಾಲ್ಗೊಂಡು ಮುಖೇಶನ ಕುಟುಂಬ ಮನೆಗೆ ವಾಪಸ್ಸಾಗಿತ್ತು. ಮುಖೇಶ ಕೂಡ ಮನೆಗೆ ಹಿಂದುರುಗುವವರಿದ್ದರು. ಸೋಮವಾರ ರಾತ್ರಯೇ ಮುಖೇಶ ಕೂಡ ಮನೆಗೆ ವಾಪಸ್ಸಾಗಲು ಸಜ್ಜಾಗಿದ್ದಾಗ ಯುವಕರ ಗುಂಪೊAದು ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿರುದನ್ನು ಕಂಡು ಮುಖೇಶ ಆ ಯುವಕರನ್ನು ಪ್ರಶ್ನೆ ಮಾಡಿದ್ದಾನೆ.. ಇದನ್ನೇ ನೆಪವಾಗಿಟ್ಟುಕೊಂಡು ನಾಲ್ವರು ಇರುವ ಯುವಕರ ಗುಂಪು ಮುಖೇಶನನ್ನು ಗುದ್ದಿ, ಬಡಿದು, ಕಲ್ಲಿನಿಂದ ಹಲ್ಲೆ ಮಾಡಿದೆ ಮುಖೇಶ ಕುಟುಂಬದವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!