Ad imageAd image

ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿರುವವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಅಗತ್ಯ: ಅಧ್ಯಯನ

Bharath Vaibhav
ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿರುವವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಅಗತ್ಯ: ಅಧ್ಯಯನ
WhatsApp Group Join Now
Telegram Group Join Now

ರೋಗನಿರ್ಣಯದ ಬಳಿಕ 42 ದಿನಗಳಿಗಿಂತ ಹೆಚ್ಚು ಕಾಲದವರೆಗೆ ಸ್ತನ ಕ್ಯಾನ್ಸರ್​ ಶಸ್ತ್ರಚಿಕಿತ್ಸೆಯನ್ನು ವಿಳಂಬ ಮಾಡುವುದರಿಂದ ಸಾವಿನ ಅಪಾಯ ಹೆಚ್ಚಾಗುತ್ತದೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ.

ಹಾರ್ಮೋನ್ ರಿಸೆಪ್ಟರ್-ಪಾಸಿಟಿವ್, HER2- ನೆಗೆಟಿವ್ ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿರುವವರಿಗೆ ಶಸ್ತ್ರಚಿಕಿತ್ಸೆಯನ್ನು ಬೇಗನೆ ಮಾಡಬೇಕಾಗುತ್ತದೆ. ವಿಳಂಬಿಸಿದರೆ ಈ ಕ್ಯಾನ್ಸರ್‌ನಿಂದ ಸಾಯುವ ಅಪಾಯ ಹೆಚ್ಚು. ಹೀಗಾಗಿ ವಿಳಂಬವಾದಂತೆ ಗಮನಹರಿಸಿ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಒಕ್ಲಹೋಮ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಸಂಶೋಧಕರು ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದಾರೆ.

ಹಾರ್ಮೋನ್ ರಿಸೆಪ್ಟರ್-ಪಾಸಿಟಿವ್, HER2- ನೆಗೆಟಿವ್ ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿರುವವರಿಗೆ ಶಸ್ತ್ರಚಿಕಿತ್ಸೆಯನ್ನು 42 ದಿನಗಳಲ್ಲಿ ಮಾಡಬೇಕು. ಇಲ್ಲದಿದ್ದರೆ, 60 ದಿನಗಳ ನಂತರ ಶೇಕಡಾ 21, 90 ದಿನಗಳ ನಂತರ ಶೇಕಡಾ 79 ಮತ್ತು 120 ದಿನಗಳ ಬಳಿಕ ಶೇಕಡಾ 83ರಷ್ಟು ಸಾವಿನ ಅಪಾಯ ಹೆಚ್ಚಾಗುತ್ತದೆ ಎಂಬುದು ಗಮನಾರ್ಹ. ಇದು ಬಹಳ ಮುಖ್ಯವಾದ ಅಂಶ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಟಕೇಮಿ ತನಕಾ ತಿಳಿಸಿದ್ದಾರೆ.

ಮನೆಕೆಲಸಗಳ ಹೆಸರಿನಲ್ಲಿ ಶಸ್ತ್ರಚಿಕಿತ್ಸೆ ವಿಳಂಬ ಬೇಡಆರಂಭಿಕವಾಗಿ 42 ದಿನಗಳು ತುಂಬಾ ಬೇಗ ಕಳೆದು ಹೋಗುತ್ತವೆ. ಇತ್ತೀಚಿನ ಅಧ್ಯಯನಗಳು ಈ ಕ್ಯಾನ್ಸರ್‌ಗಳಿಗೆ ಚಿಕಿತ್ಸೆಯ ವಿಳಂಬ ಹೆಚ್ಚುತ್ತಿದೆ ಎಂದು ತೋರಿಸುತ್ತವೆ. ಇದು ಕಳವಳಕಾರಿಯಾಗಿದ್ದು, ಕೆಲವೊಮ್ಮೆ ಕ್ಯಾನ್ಸರ್ ರೋಗನಿರ್ಣಯದ ನಂತರ, ಶಸ್ತ್ರಚಿಕಿತ್ಸೆಗೆ ಮುಂಚಿನ ಪ್ರಕ್ರಿಯೆಯು ಹಲವಾರು ದಿನಗಳನ್ನು ತೆಗೆದುಕೊಳ್ಳಬಹುದು. ಆದ್ರೆ, ಕ್ಯಾನ್ಸರ್ ರೋಗಿಗಳು ಮನೆಕೆಲಸಗಳು ಮತ್ತು ಕುಟುಂಬದ ಜವಾಬ್ದಾರಿಗಳ ಹೆಸರಿನಲ್ಲಿ ತಮ್ಮ ಶಸ್ತ್ರಚಿಕಿತ್ಸೆಯ ದಿನಾಂಕವನ್ನು ಮುಂದೂಡಬಹುದು. ಕೆಲವರು ಬೇರೆ ವೈದ್ಯರ ಸಲಹೆ ಪಡೆಯಲು ಕೂಡ ಸಮಯ ತೆಗೆದುಕೊಳ್ಳಬಹುದು.

WhatsApp Group Join Now
Telegram Group Join Now
Share This Article
error: Content is protected !!