ಬೆಂಗಳೂರು: ನಮಗೆ ಅವರು ಗೊತ್ತು, ನಮಗೆ ಇವರು ಗೊತ್ತು ಅಂತ ಜನರನ್ನ ನಂಬಿಸಿ ಮೋಸ ಮಾಡುವವರು ಕಮ್ಮಿ ಏನಿಲ್ಲ. ಈ ರೀತಿಯ ಪ್ರಕರಣಗಳು ಅನೇಕ ಬಾರಿ ಬೆಳಕಿಗೆ ಬಂದಿದೆ.
ಇದೀಗ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಮೇಲೆ ಸಹ ಇದೇ ರೀತಿಯ ಆರೋಪ ಕೇಳಿ ಬಂದಿದೆ.
ವಸಂತ ಮುರುಳಿ ಅನೇಕ ಜನರಿಗೆ ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಮೋಸ ಮಾಡಿದ್ದು, ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ಜನ ಆರೋಪಿಸಿದ್ದಾರೆ.
ನನಗೆ ಸಿಎಂ ಗೊತ್ತು, ನನಗೆ ಮಿನಿಸ್ಟರ್ ಗೊತ್ತು ಎಂದು ಹೇಳುವ ಮೂಲಕ ಜನರನ್ನ ಮೋಸದ ಬಲೆಗೆ ಬೀಳಿಸಿದ್ದು, ಈ ಬಗ್ಗೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಮೋಸದ ಬಗ್ಗೆ ತಿಳಿದ ಜನರು ವಸಂತ ಅವರು ಟೌನ್‌ಹಾಲ್‌ನಲ್ಲಿ ನಡೆಸುತ್ತಿದ್ದ ಕಾರ್ಯಮಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಈ ವೇಳೆ 2 ಗುಂಪುಗಳ ನಡುವೆ ಜಗಳ ಆಗಿದೆ.
ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ವಿಶ್ವಕರ್ಮ ಸಮಾಜದ ಕಾರ್ಯಕ್ರಮದ ನಡೆಯುತ್ತಿತ್ತು, ಈ ಸಮಯದಲ್ಲಿ ದೊಡ್ಡ ಹಂಗಾಮವೇ ಆಗಿದ್ದು, ಒಂದು ವರ್ಷ ಕಳೆದರೂ ಸಹ ಕೆಲಸ ಕೊಡಿಸಿಲ್ಲ ಹಾಗೆಯೇ, ಹಣವನ್ನ ಸಹ ಮರಳಿ ಕೊಟ್ಟಿಲ್ಲ ಎಂದು ಜನ ಆರೋಪಿಸಿದ್ದಾ ರೆ.




