ಬಾಗಲಕೋಟೆ : ಹುನಗುಂದ ತಾಲ್ಲೂಕಿನ ಧನ್ನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇದ್ದಲಗಿ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರದಲ್ಲಿ ನರೇಗಾ ಉಚಿತ ಸಹಾಯವಾಣಿ 8277506000 ಕುರಿತು ಸಹಾಯಕ ನಿರ್ದೇಶಕ (ಗ್ರಾ) ಮಹಾಂತೇಶ್ ಕೋಟಿ ತಿಳಿಸಿದರು.
ನರೇಗಾ ಹಾಗೂ ಗ್ರಾಪಂ ಮಟ್ಟದಲ್ಲಿನ ಕುಂದು ಕೊರತೆಗಳ ಪರಿಹಾರಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸ್ಥಾಪಿಸಿರುವ ಉಚಿತ ಸಹಾಯವಾಣಿ 8277506000 ಸಂಖ್ಯೆ ಬಗ್ಗೆ ಸವಿವರವಾಗಿ ಕೂಲಿ ಕಾರ್ಮಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಆರೋಗ್ಯ ಇಲಾಖೆ ಸಿಬ್ಬಂದಿ, ತಾಪಂ ಆರೋಗ್ಯ ಇಲಾಖೆ ಸಿಬ್ಬಂದಿ, ಐಇಸಿ ಸಂಯೋಜಕರು, ಗ್ರಾಪಂ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸರ್ವ ಸದಸ್ಯರು, ಬಿಎಫ್ ಟಿ ಅವರು, ಕಾಯಕಮಿತ್ರರು, ಗ್ರಾಮಸ್ಥರು, ಕಾಯಕಬಂಧುಗಳು ಉಪಸ್ಥಿತರಿದ್ದರು.