ಹುಬ್ಬಳ್ಳಿ : ನಗರದ ಪಂಚಮವೇದ ಆರ್ಯುವೇದ ಹುಬ್ಬಳ್ಳಿ ಮತ್ತು ಶ್ರೀ ವಿಶ್ವಶ್ರದ್ಧಾ ಆರ್ಯುವೇದ ಚಿಕಿತ್ಸಾಲಯ ಪಂಚಕರ್ಮ ಯೋಗ ಕೇಂದ್ರದ ವತಿಯಿಂದ ಶಸ್ತ್ರಚಿಕಿತ್ಸೆ ರಹಿತ ಬೆನ್ನುಮೂಳೆ ಮತ್ತು ಕೀಲು ನೋವು ನಿವಾರಣೆಗಾಗಿ ಉಚಿತ ಆರ್ಯುವೇದ ಹಾಗೂ ಪಂಚಭೌತಿಕ ಚಿಕಿತ್ಸಾ ಶಿಬಿರವನ್ನು ಜ ೨೪ ರಂದು ನಗರದ ಹೊಸೂರು ಕ್ರಾಸ್ ನ ಹಳೇ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಎದುರಿನ ಪಂಚಮವೇದ ಆರ್ಯುವೇದದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಶ್ರದ್ಧಾ ಆರ್ಯುವೇದ ಚಿಕಿತ್ಸಾಲಯದ ಡಾ. ಪ್ರವೀಣ ಕುಲಕರ್ಣಿ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಬೆನ್ನುನೋವು ಮತ್ತು ಕೀಲು ನೋವಿನಿಂದ ಬಳಲುತ್ತಿರುವವರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಇನ್ನೂ ಪ್ರತಿ ತಿಂಗಳು ಹಾಗೂ ನಾಲ್ಕನೇ ಶನಿವಾರ ಬೆ. ೧೧ ರಿಂದ ೪ ಗಂಟೆಯವರೆಗೆ ಚಿಕಿತ್ಸೆ ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗಾಗಿ 8971284448 ಹಾಗೂ 7776860479 ಗೆ ಸಂಪರ್ಕಿಸಬಹುದಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿಜಯಲಕ್ಷ್ಮಿ ಧಾರವಾಡಕರ ಉಪಸ್ಥಿತರಿದ್ದರು.
ವರದಿ : ಸುಧೀರ್ ಕುಲಕರ್ಣಿ




