ನಿಪ್ಪಾಣಿ: 108 ರೋಗಿಗಳ ತಪಾಸನೆ ಆಂಕರಿಂಗ್ = ಹೌದು. ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ಪದ್ಮಾವತಿ ನೇತ್ರ ಚಿಕಿತ್ಸಾಲಯ, ಫೇಕೋ ಸೆಂಟರ್, ಹಾಗೂ ಸಿದ್ಧಾಂತ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಉಚಿತ ಸರ್ವ ರೋಗ ತಪಾಸನೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಡಾ. ಅಮೋಲ್ ಖುರಪೆ, ಮಾತನಾಡಿ *ತಮ್ಮ ಆಸ್ಪತ್ರೆಯಲ್ಲಿ ಸಹಜ ಹೆರಿಗೆಗೆ ಪ್ರೋತ್ಸಾಹ ನೀಡಲಾಗುತ್ತಿದ್ದು ಪ್ರತಿ ತಿಂಗಳು ಕನಿಷ್ಠ 10 ಕ್ಕೂ ಅಧಿಕ ಸಹಜ ಹೆರಿಗೆಗಳಾಗುತ್ತಿವೆ. ಇನ್ನು ಮುಂದೆ ಪ್ರತಿ ತಿಂಗಳು ಅಸ್ತಿರೋಗ, ಇ ಎನ್ ಟಿ, ಬಂಜೆತನ, ಮಕ್ಕಳ ರೋಗ, ಸರ್ಜರಿ, ಹಾಗೂ ಪಂಚ ಕರ್ಮ ಸೇರಿ. ವಿವಿಧ ರೋಗಗಳ ಉಚಿತ ರೋಗಗಳ ತಪಾಸನೆ, ಹಾಗೂ ಶೇ. 50ರಷ್ಟು ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿದ್ದು ಸರ್ವಜನಿಕರು ಇದರ. ಲಾಭ ಪಡೆದುಕೊಳ್ಳಬೇಕೆಂದರು. . ಪ್ರಾರಂಭದಲ್ಲಿ ಅನಿಲ ಗೋಸಾವಿ ಸ್ವಾಗತಿಸಿ ವಿವಿಧ ತಜ್ಞ ವೈದ್ಯರನ್ನು ಪರಿಚಯಿಸಿದರು. ಇದೇ ವೇಳೆ ಡಾ. ವೀರಕುಮಾರ್ ಉತ್ತೂರೆ, ಡಾ. ನಿಲೇಶ ಚೌಗುಲೆ, ಮಾತನಾಡಿದರು. ಶಿಬಿರದಲ್ಲಿ ಡಾ. ಇರಫಾನ ಬೇಗ್, ಸಂತೋಷ ಕಾಂದೆಕರ, ಡಾ. ಅಭಿಜಿತ್ ಭರಮಗೌಡ, ತೇಜಪಾಲ್ ಚೆಂಡಕೆ ಗಿರೀಶ್ ಕುಲಕರ್ಣಿ, ಡಾ. ರಾಹುಲ ಪಟ್ಟೆಕರಿ, ಡಾ. ಪ್ರತಿಭಾ ಚೌಗಲೇ, ವಿನಾಯಕ ಮಾನೆ ಸೇರಿ ಅನೇಕ ವೈದ್ಯರು ವಿವಿಧ ರೋಗಗಳ 108 ರೋಗಿಗಳನ್ನು ತಪಾಸನೆ ಮಾಡಲಾಯಿತು.
ವರದಿ: ಮಹಾವೀರ ಚಿಂಚಣೆ




