ರಾಮದುರ್ಗ :-ಶ್ರೀಪತಿ ನಗರದಲ್ಲಿದ್ದ ಲಯನ್ಸ್ ಸಂಸ್ಥೆಯು ಹುಬ್ಬಳ್ಳಿಯ ಡಾ. ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ರಾಮದುರ್ಗ ಸಾರ್ವಜನಿಕ ಆಸ್ಪತ್ರೆ ಮತ್ತು ಬೆಳಗಾವಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಇವುಗಳ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಪಿ. ಎಮ್. ಪಾಲರೇಶಾ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಡಾ. ಎಂ. ಎಂ. ಜೋಶಿ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಶಣ್ಮುಖಪ್ರೀಯಾ ಅವರು ಶಿಬಿರ ಉದ್ಘಾಟಿಸಿ ಕಣ್ಣಿನ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಡಾ. ಎಂ. ಎಂ. ಜೋಶಿ ಆಸ್ಪತ್ರೆಯ ಶಿಬಿರ ಸಂಯೋಜಕರಾದ ರಾಜ ಕಟ್ಟಿ ಅವರು ಮಾತನಾಡಿ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳು ಬಡವರಿಗೆ ಬಹಳ ಸಹಾಯಕಾರಿಯಾಗಿದ್ದು ಎಲ್ಲರೂ ಅದರ ಉಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಒಟ್ಟು 147 ಜನರ ಕಣ್ಣು, ರಕ್ತದ ಒತ್ತಡ ಮತ್ತು ಸಕ್ಕರೆ ರೋಗವನ್ನು ಉಚಿತವಾಗಿ ಪರೀಕ್ಷಿಸಲಾಯಿತು. ಪೊರೆ ಇದ್ದ 44 ಜನರನ್ನು ಶಸ್ತ್ರಚಿಕಿತ್ಸೆಗೆ ಅಯ್ಕೆಮಾಡಿ ಹುಬ್ಬಳ್ಳಿಯ ಡಾ. ಎಂ. ಎಂ. ಜೋಶಿ ಆಸ್ಪತ್ರೆಗೆ ಕಳಿಸಲು ವ್ಯವಸ್ಥೆ ಮಾಡಲಾಯಿತು.
ಲಯನ್ಸ್ ಅಧ್ಯಕ್ಷ ಪಿ. ವಿ. ಕಂಬಾರ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಬಾಬಣ್ಣ ಪತ್ತೆಪೂರ ಮಾತನಾಡಿದರು.. , ಕಾರ್ಯದರ್ಶಿ ಸುನಿಲ್ ಹೊಂಗಲ, ಖಜಾಂಚಿ ಬಿ. ಪಿ. ಅರಳಿಮಟ್ಟಿ, ಸರಕಾರಿ ಆಸ್ಪತ್ರೆಯ ಶಂಕರ ಲಕಾಟ್ಟಿ, ಯಶೋಧ ತೋರಣಗಟ್ಟಿ ವೇದಿಕೆಯ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಡಾ. ಸಿ. ಜಿ ಅಗಡಿ, ವೆಂಕಟೇಶ್ ಹಿರೇರಡ್ಡಿ, ಅಪ್ಪು ದಿಂಡವಾರ, ಎಂ. ಎಸ್. ಕೊಟ್ರನ್ನವರ, ಗೋಪಾಲ ಬಿಂದಗಿ, ಬಿ. ಎಲ್. ಸಂಕನಗೌಡರ ಮುಂತಾದವರು ಭಾಗವಹಿಸಿದ್ದರು. ಜಯಂತ ಪಾಲರೇಶಾ ಕಾರ್ಯಕ್ರಮ ನಿರೂಪಿಸಿದರು.
ವರದಿ:-ಮಂಜುನಾಥ ಕಲಾದಗಿ