ವೀರಾಪುರ:– ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ವೀರಾಪುರ ಗ್ರಾಮದ ಸತ್ಯಮ್ಮಾ ತಾಯಿ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಬೆಳಗಾವಿ ಯ ಸಾಯಿ ದೀಪ ಆಸ್ಪಿಟಲ್ ಸಹಯೋಗದಲ್ಲಿ ಗ್ರಾಮದ ಜನತೆಗೆ ಉಚಿತವಾಗಿ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಆಲಿ ಸಾಬ್ ತಲಗಡೆ, ತಾಲ್ಲೂಕು ಸಮನ್ವಯ ಅಧಿಕಾರಿಗಳು ಆದ ಸಂದೀಪ್ ನಾಯಕ್, ಜನಾರ್ಧನ ನಾಯಕ್, ಮುಖಂಡ ಗದಿಗಯ್ಯ ಗುಂಡಕಲ್, ಮಾರುತಿ ಕಾದ್ರೋಳ್ಳಿ ಹಾಗೂ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು, ಸಾಯಿ ದೀಪ ಆಸ್ಪಿಟಲ್ ತಂತ್ರಜ್ಞ ಆಲಿ ಸೇರಿದಂತೆ ಎಲ್ಲರ ನೇತೃತ್ವದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಗೊಂಡಿತು, ಈ ಸಂದರ್ಭದಲ್ಲಿ ಈ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಸ್ಥೆಯ ಜನಪರ ಕೆಲಸಗಳ ಬಗ್ಗೆ ಪತ್ರಕರ್ತ ಬಸವರಾಜು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಜನಾರ್ದನ ನಾಯಕ್ ಮಾತನಾಡಿದರು. ನಂತರ ಉಚಿತವಾಗಿ ಆಯೋಜಿಸಿದ ಕಣ್ಣಿನ ತಪಾಸಣೆ ಶಿಬಿರದಲ್ಲಿ 300 ಕ್ಕೂ ಹೆಚ್ಚು ಜನ ತಪಾಸಣೆ ಮಾಡಿಸಿಕೊಂಡರು.
ನಮ್ಮ ನ್ಯೂಸ್ ಸಮೂಹದೊಂದಿಗೆ ಅಧಿಕಾರಿಗಳು ಹಾಗೂ ವೈದ್ಯರು ಮಾತನಾಡಿದರು. ಈ ಸಂದರ್ಭದಲ್ಲಿ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಮಹಿಳಾ ಸಂಘದ ಸದಸ್ಯರ ವತಿಯಿಂದ ಸನ್ಮಾನ ಮಾಡಲಾಯಿತು.
ಸಂಸ್ಥೆಯ ಸಿಬ್ಬಂದಿಗಳು ಆದ ಶಿಲ್ಪಾ ಕೆಂಚ ರಾಹುತ್, ಪವಿತ್ರಾ ಕಾದ್ರೋಳ್ಳಿ ಉಪಸ್ಥಿತರಿದ್ದರು, ಒಟ್ಟಾರೆ ಅರ್ಥಪೂರ್ಣವಾಗಿ ಈ ಉಚಿತ ಕಣ್ಣಿನ ತಪಾಸಣಾ ಶಿಬಿರ ಮುಕ್ತಾಯಗೊಂಡಿತು.
ವರದಿ:- ಬಸವರಾಜು.