
ಮೊಳಕಾಲ್ಮೂರು :ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗು ಕರ್ನಾಟಕ ರಾಜ್ಯ ದ್ರಾಕ್ಷಿ ಮತ್ತು ವೈನ್ ಮಂಡಳಿಯ ಅಧ್ಯಕ್ಷರಾದ ಡಾ.ಬಿ.ಯೋಗೇಶ್ ಬಾಬು ರವರ ಹುಟ್ಟು ಹಬ್ಬದ ಪ್ರಯುಕ್ತ ಡಾ.ಬಿ.ಯೋಗೇಶ್ ಬಾಬು ಗೆಳೆಯರ ಬಳಗದ

ವತಿಯಿಂದ ಕೋನಸಾಗರ ಗ್ರಾಮ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರ ಮಠದಲ್ಲಿ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಈ ಶಿಬಿರದಲ್ಲಿ ವಿಜಯ ಮಹಾಂತೇಶ್ವರ ಶಾಖಾ ಮಠ ಸಿದ್ದಯ್ಯನ ಕೋಟೆಯ ಸ್ವಾಮೀಜಿಗಳಾದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಮಾಜಿ ಸಚಿವರಾದ ಅಶ್ವಥ್ ರೆಡ್ಡಿ ರವರ ಪುತ್ರ ಗುಂಡಾರ್ಪಿ ಶಾಮ ಸುಂದರ್, ಕೆಪಿಸಿಸಿ ಹಿಂದುಳಿದ ವರ್ಗದ

ಪ್ರಧಾನ ಕಾರ್ಯದರ್ಶಿಗಳು ಹಾಗೂ ತಾಲೂಕು ಕುರುಬ ಸಂಘದ ಅಧ್ಯಕ್ಷರಾದ ಜಿ.ಎನ್. ಜಗದೀಶ್ ಹಾಗು ಚಿತ್ರದುರ್ಗ ಕಾಂಗ್ರೆಸ್ ಜಿಲ್ಲಾ ಎಸ್.ಸಿ ಘಟಕದ ಅಧ್ಯಕ್ಷರಾದ ಮೊಗಲಹಳ್ಳಿ ಜಯಣ್ಣ, ಜಗಲೂರಯ್ಯ, ಸಿದ್ಧಯ್ಯನಕೋಟೆ ಶಾಖಾ ಮಠದ ಅಧ್ಯಕ್ಷರಾದ

ಕಾಂತರಾಜ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: ಪಿಎಂ ಗಂಗಾಧರ




