ಸೇಡಂ: ಉದ್ದಿಮೆದಾರರು ಹಾಗೂ ಕಾಂಗ್ರೆಸ್ ಯುಮುಖಂಡರು ಕಲಬುರಗಿ ವಿನೋದ್ ಸಾಹುಕಾರ್ ಮಲ್ಕಪಲ್ಲಿ ಅವರ ಜನ್ಮ ದಿನದ ನಿಮಿತ್ತ ಮಲ್ಕಪಲ್ಲಿ ಗ್ರಾಮದಲ್ಲಿ ಬಿಲ್ವ ಆಸ್ಪತ್ರೆ ಕಲಬುರಗಿ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ಇದರ ಸದುಪಯೋಗ ಸುಮಾರು ೨೫೦ ಜನ ಪಡೆದುಕೊಂಡಿದ್ದಾರೆ. ಸುಮಾರು ೮ವರ್ಷದಿಂದ ಮಲ್ಕಪಲ್ಲಿ ಗ್ರಾಮದ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಸುಮಾರು ಎರಡು ನೂರಕ್ಕಿಂತ ಹೆಚ್ಚಿನ ರೋಗಿಗಳನ್ನು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ತೋರಿಸುವ ಮುಖಾಂತರ ಅವರ ಸಂಪೂರ್ಣ ಜವಾಬ್ದಾರಿಯನ್ನು ಗುಲ್ಬರ್ಗದಲ್ಲಿ ತಗೊಂಡು ಅವರಿಗೆ ಆರೋಗ್ಯದ ವಿಚಾರದಲ್ಲಿ ಉತ್ತಮ ಚಿಕಿತ್ಸೆಯನ್ನು ಕೊಡಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ ಎಂದು ವಿನೋದ್ ಸಾಹುಕಾರ್ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




