ಯಲಹಂಕ: ವಿಶ್ವವಾಣಿ ಫೌಂಡೇಶನ್ ಮತ್ತು ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ, ಉಚಿತ ಆರೋಗ್ಯ ತಪಾಸಣೆ ಮತ್ತು ಸ್ತ್ರೀ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಿಂಗನಾಯಕನಹಳ್ಳಿಯ ಪುನೀತ್ ರಾಜಕುಮಾರ್ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಮತ್ತು ವಾಣಿಶ್ರೀ ವಿಶ್ವನಾಥ್ ಇವರುಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಮಹಿಳಾ ಸಾಧಕರಿಗೆ ಮತ್ತು ಮಹಿಳಾ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಸ್ವಸಹಾಯ ಸಂಘಗಳಿಗೆ ಶಾಸಕರ ಧರ್ಮ ಪತ್ನಿ ವಾಣಿಶ್ರೀ ವಿಶ್ವನಾಥ್ ಚೆಕ್ ವಿತರಿಸಿದರು.
ಮಹಿಳೆಯರಿಂದ ಮನೊರಂಜನೆ ಸಂಗೀತ ಚಲನಚಿತ್ರ ಗೀತೆ ನೃತ್ಯ ಗಾಯನ ಜರುಗಿದವು.
ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಉಚಿತ ಔಷಧಿ ವಿತರಣೆ ಬ್ರೆಸ್ಟ್ ಕ್ಯಾನ್ಸರ್ ಸ್ಕ್ರೀನಿಂಗ್ ಹಾಗೂ ಮಣಿಪಾಲ್ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಕ್ಯಾಟ್ರಾಕ್ಟ್ ಕಣ್ಣಿನ ತಪಾಸಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡ ಅಲೋಕ್ ವಿಶ್ವನಾಥ್, ಗ್ರಾಮಾಂತರ ಮಂಡಲ ಅಧ್ಯಕ್ಷ ಎನ್ ರಾಮ್ ಮೂರ್ತಿ. ರೈತ ಸಂಘದ ಕಡತನ ಮಲೆ ಸತೀಶ್ ಗ್ರಾಮಾಂತರ ಎಸ್ಸಿ ಘಟಕದ ಅಧ್ಯಕ್ಷ ಬಿ. ಶ್ರೀನಿವಾಸಯ್ಯ, ವಿಶ್ವವಾಣಿ ಫೌಂಡೇಶನ್ ಪದಾಧಿಕಾರಿಗಳು ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.
(ವರದಿಗಾರರು: ಬಾಲಾಜಿ ವಿ




