ಬೀದರ : ರೋಗಗಳು ಬರುವ ಮನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು ಎಂದು
ಸದ್ಗುರು ಶಂಕರದತ್ತ ಮಹಾರಾಜ ಆಶ್ರಮದ ಶ್ರೀ ಶಂಕರದತ್ತ ಮಹಾರಾಜರು ತಿಳಿಸಿದರು.
ತಾಲ್ಲೂಕಿನ ಗುನ್ನಳ್ಳಿ ಗ್ರಾಮದ ವಿರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸೂರ್ಯ ಫೌಂಡೇಶನ್, ಇಂಟರ್ನ್ಯಾಷನಲ್ ನ್ಯಾಚುರೋಪತಿ ಆರ್ಗನೈಸೇಶನ್, ಪತಂಜಲಿ ಯುವ ಸಮಿತಿ ಬೀದರ ಹಾಗೂ ಸದ್ಗುರು ಶಂಕರದತ್ತ ಮಹಾರಾಜ ಆಶ್ರಮ ಗುನ್ನಳ್ಳಿಯ ವತಿಯಿಂದ ಎನ್.ಕೆ ಜಾಬಶೆಟ್ಟಿ ಆಯುರ್ವೇದ ಮೇಡಿಕಲ್ ಕಾಲೇಜು ಬೀದರ ಸಹಕಾರದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯವಾಗಿದ್ದರೆ, ಸುಖವಾಗಿ ಬಾಳಬಹುದು ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚುಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ತಿಳಿಸಿದರು.
ಎನ್.ಕೆ ಜಾಬಶೆಟ್ಟಿ ಆಯುರ್ವೇದ ಮೇಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಚಂದ್ರಕಾಂತ ಹಳ್ಳಿ ಮಾತನಾಡಿ ಆರೋಗ್ಯ ಶಿಬಿರಗಳಿಂದ ಗ್ರಾಮೀಣ ಭಾಗದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು ಎಂದು ತಿಳಿಸಿದರು.
ಡಾ.ವಿನೋದಕುಮಾರ ಭೂರಾಳೆ ಹಾಗೂ ಡಾ.ಮಲ್ಲಿಕಾರ್ಜುನ ಅವರು ಆಯುರ್ವೇದ ಚಿಕಿತ್ಸಾ ಪದ್ದತಿಗಳಾದ ಪಂಚಕರ್ಮ, ಕಾಯ, ಸ್ತ್ರೀರೋಗ, ಶಲ್ಯ , ಬಾಲರೋಗ, ವಿಷ ಚಿಕಿತ್ಸೆಗಳ ಬಗ್ಗೆ ಅರಿವು ಮೂಡಿಸಿದರು, ಬಳಿಕ ಸೂಮಾರು 100ಕ್ಕೂ ಹೆಚ್ಚು ರೋಗಿಗಳ ಆರೋಗ್ಯ ತಪಾಸಣೆಯನ್ನ ಸಿದ್ದಾರೂಢ ಧರ್ಮಾರ್ಥ ಆಸ್ಪತ್ರೆಯ ವೈದ್ಯರು ನಡೆಸಿದರು.
ಈ ಸಂದರ್ಭದಲ್ಲಿ ಐ.ಎನ್.ಓ ಜಿಲ್ಲಾದ್ಯಕ್ಷರಾದ ಗೋರಖನಾಥ ಕುಂಬಾರ, ರಾಜ್ಯ ಕಾರ್ಯದರ್ಶಿ ಯೋಗೇಂದ್ರ ಯದಲಾಪುರೆ ಪ್ರಮುಖರಾದ ವಿರೇಂದ್ರ ಪಾಟೀಲ, ನಾಗಶೇಟ್ಟಿ ಬಿರಾದಾರ, ಬಸವರಾಜ ಅಡೆಪ್ಪನೋರ, ಸೂರ್ಯಕಾಂತ ಪಾಟೀಲ, ಧನಶೇಟ್ಟಿ, ಕಂಟೆಪ್ಪಾ, ಸೋಮನಾಥ ಮನ್ನಳ್ಳಿ, ಅನೀಲ ಬಿರಾದಾರ, ಆಕಾಶ ಅಡೆಪ್ಪಾ ಸೇರಿದಂತೆ ಇತರರಿದ್ದರು.
ವರದಿ: ಸಂತೋಷ ಬಿಜಿ ಪಾಟೀಲ




