ಅರಸಿಕೆರೆ : ಸಾರ್ವಜನಿಕರು ಸಮಾಜ ಸೇವೆಯಲ್ಲಿ ತಮ್ಮದೇ ಆದ ಸೇವೆಯನ್ನು ಮಾಡಿದ್ದೆ ಆದರೆ ಸಮಾಜದ ಸತ್ಕಾರ್ಯ ತೋಡಗಿಸಿಕೊಂಡಲ್ಲಿ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಬೇಕು ಎಂದು ತರಳಬಾಳು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಂಗಸ್ವಾಮಿ ಅಭಿಪ್ರಾಯ ಪಟ್ಟರು, ಕಸಬಾ ಹೋಬಳಿಯ ಹಾರನಹಳ್ಳಿ ಗ್ರಾಮದಲ್ಲಿ ಸಪ್ತಗಿರಿ ಆಸ್ಪತ್ರೆ, ಬೆಂಗಳೂರು, ಶರತ್ ಕಣ್ಣಿನ ಆಸ್ಪತ್ರೆ, ಕಡೂರು,ಐಡಿಎಫ್/ಗ್ರಾಮ್ ಸರ್ವ್ಪ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ಶ್ರೀ ತರಳಬಾಳು ವಿದ್ಯಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮಧುಮೇಹ,ನರರೋಗ, ಕ್ಯಾನ್ಸರ್, ಹೃದಯರೋಗ, ಮೂತ್ರಪಿಂಡದ ಕಲ್ಲು, ನೇತ್ರಾ ತಪಸಣಾ ಶಿಬಿರದಲ್ಲಿ ಮಾತನಾಡಿದ ಅವರು ಇಂದು 450 ಜನಕ್ಕೊ ಹೆಚ್ಚು ಈ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಲಿದ್ದಾರೆ ಇಂತಹ ಶಿಬಿರಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾಕ್ಟರ್ ಯಜಮಾನ್ ಶರತ್, ಮಧುಮೇಹ ಡಾಕ್ಟರ್ ವತ್ಸಲಾಶರತ್, ಡಾಕ್ಟರ್ ಜೀವನ್, ಡಾಕ್ಟರ್ ವಿದ್ಯಾರ್ಥಿ,ಸಿಂಡ್ರೋಮ್, ಚಿತ್ರ, ಶೇಖರಪ್ಪ ,ರೇಖಾ,ಮೀನು,ಸುಮ,ಜೀವನ್, ಹೇಮಲತಾ, ಸೌಮ್ಯ ಇತರರು ಹಾಜರಿದ್ದರು.
ಅರಸೀಕೆರೆ ತಾಲೂಕಿನ ಕಸಬಾ ಹೋಬಳಿಯ ಹಾರನಹಳ್ಳಿ ತರಳಬಾಳು ವಿದ್ಯಾ ಸಂಸ್ಥೆ ಯು ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳುಅರಸೀಕೆರೆ ತಾಲೂಕಿನ ಕಸಬಾ ಹೋಬಳಿಯ ಹಾರನಹಳ್ಳಿ ಶ್ರೀ ತರಳಬಾಳು ವಿದ್ಯಾ ಸಂಸ್ಥೆ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಬಂದಂತ ಡಾಕ್ಟರ್, ಹಾಗೂ ಸಹ ಸಿಬ್ಬಂದಿ ವರ್ಗ ಹಾಜರಿದ್ದರು.
ವರದಿ: ರಾಜು ಅರಸೀಕೆರೆ




