ಸಿರುಗುಪ್ಪ : ರಾರಾವಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ನಾಯಕರಾದ ಹಾಗೂ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ರವರ 75ನೇ ಜನ್ಮದಿನದ ಪ್ರಯುಕ್ತ ಸಾರ್ವಜನಿಕರಿಗಾಗಿ ಆರೋಗ್ಯ ಶಿಬಿರ ಏರ್ಪಡಿಸಿದ್ದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಾರ್ವಜನಿಕ ಆಸ್ಪತ್ರೆ ಹಿರಿಯ ವೈದ್ಯರು,ಡಾ.ಬಸವರಾಜ ಉದ್ಘಾಟಿಸಿದರು.
ಮಾಜಿ ಶಾಸಕರು ಸೋಮಲಿಂಗಪ್ಪ ಮಾತನಾಡಿ ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರ ಜತೆಗೆ ದಿನನಿತ್ಯ ಒಂದಿಲ್ಲೊಂದು ಕೆಲಸ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಉಳಿಸಿಕೊಳ್ಳಲು ಸಾಧ್ಯ ಎಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ತಿಳಿ ಪಡಿಸಿದರು.
ತಾಲ್ಲೂಕಿನ ರಾರಾವಿ ಗ್ರಾಮದಲ್ಲಿ ಬಿಜೆಪಿ ತಾಲೂಕು ಎಸ್, ಸಿ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ,ಡಾ, ಬಸವರಾಜ ಪ್ರತಿದಿನ ಹೆಚ್ಚು ನಡೆದಾಡುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಆರೋಗ್ಯ ಉತ್ತಮಪಡಿಸಿಕೊಳ್ಳಬಹುದು.
ಇಂತಹ ಆರೋಗ್ಯ ಶಿಬಿರ ಹಳ್ಳಿಗಳಲ್ಲಿ ಹೆಚ್ಚು ನಡೆಯಬೇಕು. ಇದರಿಂದ ಗ್ರಾಮಾಂತರ ಪ್ರದೇಶದ ಜನಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಎಂದರು.
ಡಾ. ರೇಣುಕಾ ಅವರು ಮಾತನಾಡಿ,ನಾನು ಬಡವರ ಮಕ್ಕಳಿಗೆ ಓದುವ ಮೆಡಿಕಲ್ ವಿದ್ಯಾಭ್ಯಾಸಕ್ಕೆ ಬೇಕಾಗಿರುವ ಬುಕ್ಸ್ ಸಹಾಯ ಮುಗಿಯುವವರೆಗೂ ಅಳಿಲು ಸೇವೆ ಮಾಡುವೆ. ನನ್ನಿಂದ ಸಹಾಯ ತಗೊಂಡಿರೋರು ಅವರು ಇನ್ನೊಬ್ಬರಿಗೆ ಸಹಾಯ ಮಾಡಬೇಕು ಅದೇ ನನ್ನ ಆಸೆ ಎಂದು ಆರೋಗ್ಯ ಶಿಬಿರ ದಲ್ಲಿ ಹೇಳಿಕೊಂಡರು.
ಬಿಜೆಪಿ ತಾಲೂಕು ಅಧ್ಯಕ್ಷರು ಕುOಟ್ನಾಳ್ ಮಲ್ಲಿಕಾರ್ಜುನ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಈ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಂಡು ಜೀವನ ಶೈಲಿಸಾಧ್ಯವಾದಷ್ಟು ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಎಂದರು.
ಇದೆ ವೇಳೆ ಆಶಾ ಕಾರ್ಯಕರ್ತರು, ಆಸ್ಪತ್ರೆಯ ಸಿಬ್ಬಂದಿವರ್ಗುದವರು, ಬಿಜೆಪಿ ತಾಲೂಕು ಎಸ್.ಸಿ. ಮೋರ್ಚಾ ಅಧ್ಯಕ್ಷರು ವಿ ಮಾರೇಶ, ಎಸ್ ಹಾಗೂ. ಉಪಾಧ್ಯಕ್ಷರು ನಾಗರಾಜ ಟಿ.ಮೋರ್ಚಾ ಬಿಜೆಪಿ ತಾಲೂಕು ಅಧ್ಯಕ್ಷರು ಶಿವಪ್ಪ,ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರು ಲಕ್ಷ್ಮಿ ನಾಗೇಶ,ಗ್ರಾ.ಪಂ. ಅಧ್ಯಕ್ಷರು ಹನುಮಂತಮ್ಮ, ಸದಸ್ಯರು ಸೋಮಯ್ಯ, ಗ್ರಾಮ ಪಂಚಯಿತಿ ಉಪಾಧ್ಯಕ್ಷರು ಯಲ್ಲನಗೌಡ, ಬಸವನಗೌಡ,ಬಸವರಾಜ ಬಂಡ್ರಾಳು, ಕೆ ಸೂಗೂರು ಪಂಚಾಯತಿ ಮಾಜಿ ಅಧ್ಯಕ್ಷರು ನಾಗೇಶ್ವರವು, ಮಂಜುನಾಥ, ಕಿಷ್ಟಪ್ಪ,ಹೊನ್ನಯ್ಯ ಗ್ರಾಮದ ಮುಖಂಡರು, ಇದ್ದರು.
ವರದಿ : ಶ್ರೀನಿವಾಸ ನಾಯ್ಕ




