Ad imageAd image

ಶ್ರೀ ಸತ್ಯಸಾಯಿ ಮೆಮೋರಿಯಲ್ ಆಸ್ಪತ್ರೆ ಮುದ್ದೇನಹಳ್ಳಿ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

Bharath Vaibhav
ಶ್ರೀ ಸತ್ಯಸಾಯಿ ಮೆಮೋರಿಯಲ್ ಆಸ್ಪತ್ರೆ ಮುದ್ದೇನಹಳ್ಳಿ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
WhatsApp Group Join Now
Telegram Group Join Now

ಚೇಳೂರು : ನೂತನ ತಾಲ್ಲೂಕು, ಚೇಳೂರು ವ್ಯಾಪ್ತಿಯ ಎಂ ನಲ್ಲ ಗುಟ್ಲಪಲ್ಲಿ ಕ್ಲಸ್ಟರ್ನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಇಂದು ಶ್ರೀ ಸತ್ಯಸಾಯಿ ಮೆಮೋರಿಯಲ್ ಆಸ್ಪತ್ರೆ ಮುದ್ದೇನಹಳ್ಳಿ ಇವರ ವತಿಯಿಂದ ನಲ್ಲ ಗುಟ್ಲಪಲ್ಲಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ವೈದ್ಯಕೀಯ ತಪಾಸಣೆಯನ್ನು ನಡೆಸಲಾಯಿತು, ವಿದ್ಯಾರ್ಥಿಗಳಿಗೆ ಆಸ್ಪತ್ರೆಯ ನುರಿತ ಮಕ್ಕಳ ವೈದ್ಯರು ತಪಾಸಣೆ ನಡೆಸಿ ದೃಷ್ಟಿ ದೋಷ. ದಂತ, ಸಾಮಾನ್ಯ ರೋಗಗಳ ಬಗ್ಗೆ ತಪಾಸಣೆ ನಡೆಸಿ ಸ್ಥಳದಲ್ಲೇ ಕೆಲವು ಔಷಧಿಗಳನ್ನು ವಿತರಿಸಿದರು ಉಳಿದಂತೆ ಇತರೆ ಬೇರೆ ಸಮಸ್ಯೆಗಳಿದ್ದರೆ ಆಸ್ಪತ್ರೆಗೆ ಬರಲು ತಿಳಿಸಿರುತ್ತಾರೆ.

ಆಸ್ಪತ್ರೆಯಲ್ಲಿ ಉಚಿತವಾಗಿ ತಪಾಸಣೆ ನಡೆಸಲಾಗುವುದು ಎಂದು ವೈದ್ಯರು ತಿಳಿಸಿರುತ್ತಾರೆ ಈ ಸಂದರ್ಭದಲ್ಲಿ ಸಿಆರ್‌ಪಿ ವಿಜಯಕುಮಾರ್ ಮಾತನಾಡಿ, ಉಚಿತ ಸೇವೆ ನೀಡುತ್ತಿರುವ ಸಂಸ್ಥೆಯವರಿಗೆ ಧನ್ಯವಾದಗಳು ತಿಳಿಸಿದರು ನಂತರ ಚೇಳೂರು ಶಿಕ್ಷಣ ಸಂಯೋಜಕರು ಮಂಜುನಾಥ್. ಟಿ ರವರು ಮಾತನಾಡಿ ವೈದ್ಯರು ವಿದ್ಯಾರ್ಥಿಗಳೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿ ಅವರ ಆರೋಗ್ಯವನ್ನು ವಿಚಾರಿಸಿ ಸೂಕ್ತ ರೀತಿಯಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದು ಸಂತಸ ತಂದಿದ್ದು ಸತ್ಯಸಾಯಿ ಮೆಮೋರಿಯಲ್ ಆಸ್ಪತ್ರೆ ಎಲ್ಲಾ ಸಿಬ್ಬಂದಿಗೆ ಇಲಾಖೆ ಪರವಾಗಿ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ಎಂ ನಲ್ಲಗುಟ್ಲಪಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್ ವೆಂಕಟರಮಣಪ್ಪ, ಹಾಗೂ ಶ್ರೀ ಸತ್ಯ ಸೇವಾ ಮೆಮೋರಿಯಲ್ ಆಸ್ಪತ್ರೆಯ ಮಕ್ಕಳ ವೈದ್ಯರು ಸಿಬ್ಬಂದಿ, ಕ್ಲಸ್ಟರ್ನ ಎಲ್ಲಾ ಶಿಕ್ಷಕರು ಮಕ್ಕಳು ಹಾಜರಿದ್ದರು.

ವರದಿ : ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!