ಚಾಮರಾಜನಗರ: ರೋಗಗಳು ಬರುವ ಮುನ್ನ ಎಚ್ಚರವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆ ಗಳಿಂದ ದೂರವಿರಬಹುದು ಎಂದು ಜಿಲ್ಲಾ ವೈದ್ಯರಾದ ದಮಯಂತಿ ರವರು ತಿಳಿಸಿದರು.
ತಾಲೂಕಿನ ಗೂಳಿಪುರ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಸುರಕ್ಷಾ ಮತ್ತು ಸಮೃದ್ಧಿ ಫೌಂಡೇಶನ್, ನಿರಂತರ ಆರೋಗ್ಯ ಯೋಜನೆ ಅಡಿಯಲ್ಲಿ ಸುರಕ್ಷಾ ಸಮೃದ್ಧಿ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ, ಶಿಬಿರವನ್ನು ನಡೆಸಲಾಯಿತು.
ಅರೋಗ್ಯ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರಕ್ಷಾ ಸಮೃದ್ಧಿ ಫೌಂಡೇಶನ್ ಅಧ್ಯಕ್ಷರಾದ ಮಧು ರವರು ವಹಿಸಿದ್ದರು. ನಂತರಕಾರ್ಯಕ್ರಮವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯ ವೈದ್ಯರಾದ ದಮಯಂತಿ ರವರು ಉದ್ಘಾಟಿಸಿ ಮಾತನಾಡಿ ಆರೋಗ್ಯವಾಗಿದ್ದರೆ ಸುಖವಾಗಿ ಬಾಳಬಹುದು ಇಲ್ಲವಾದರೆ ದುಡಿದಾನವನ್ನು ಆಸ್ಪತ್ರೆ ಖರ್ಚು ಮಾಡಬೇಕಾಗುತ್ತದೆ, ಹಾಗಾಗಿ ರೋಗದ ಲಕ್ಷಣ ಕಾಣುವ ಮುನ್ನವೇ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಪಡೆಯಬೇಕು, ಆರೋಗ್ಯ ಶಿಬಿರಗಳಿಂದ ಬಡವರಿಗೆ ತಾಕತ್ತು ಅನುಕೂಲವಾಗುತ್ತದೆ ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜನೆ ಮಾಡುತ್ತಿರುವುದು ಸಂತೋಷದ ವಿಷಯ, ಇಂದು ನೂರಾರು ರೋಗಿಗಳು ಇದರ ಲಾಭವನ್ನು ಪಡೆದುಕೊಂಡಿದ್ದಾರೆ ಮುಂದಿನ ದಿನಗಳಲ್ಲಿ ಅತಿ ಬಡವರಿರುವ ಆದಿವಾಸಿಗಳು ವಾಸಿಸುವ ಹಾಡಿಗಳು ಗ್ರಾಮಗಳಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಕೂಲಿ ಕಾರ್ಮಿಕರಿಗೂ ಸಹ ಆರೋಗ್ಯ ತಪಾಸಣೆಯನ್ನು ಮಾಡಿಸಬೇಕು,
ಆರೋಗ್ಯದ ಸುರಕ್ಷತೆಗೆ ಗ್ರಾಮೀಣ ಭಾಗದಲ್ಲಿ ಉಚಿತವಾಗಿ ರಕ್ತದೊತ್ತಡ ಸಕ್ಕರೆ ಕಾಯಿಲೆ ಕ್ಷಯ ಅಪೌಷ್ಟಿಕತೆ ಸೇರಿದಂತೆ ಇತರೆ ಸಣ್ಣಪುಟ್ಟ ಕಾಯಿಲೆಗಳ ತಪಾಸನೆಯನ್ನು ಮಾಡಲಾಗುತ್ತಿದೆ ಗ್ರಾಮದ ಪ್ರತಿಯೊಬ್ಬರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ help age india ದ ವ್ಯವಸ್ಥಾಪಕರಾದ ಪ್ರಕಾಶ್, ವೈದ್ಯರಾದ ವಿನಯ್, ಲಾವಣ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ನೀಲಮ್ಮ, ಪಿಡಿಓ ವಸಂತ, ದೊರೆಸ್ವಾಮಿ ಕೊಳ್ಳೇಗಾಲ,ಗ್ರಾಂ. ಪಂ.ಸದಸ್ಯ ಗಿರೀಶ್, ASI ವೆಂಕಟೇಶ್, ಸುರಕ್ಷಾ ಸಮೃದ್ಧಿ ಫೌಂಡೇಶನ್ ನಿರ್ದೇಶಕರುಗಳಾದ ರಾಜು, ಅಬ್ದುಲ್ ಹಮೀದ್, ಕಾರ್ಯದರ್ಶಿ ಮೇನಕ, ಸಿಬ್ಬಂದಿಗಳಾದ ಅಭಿಷೇಕ್, ಮಹೇಶ್,ಜ್ಯೋತಿ , ಗ್ರಾಮದ ಯಜಮಾನರು ಮುಖಂಡರು ಹಾಗೂ ಮಹಿಳೆಯರು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ