ಸೇಡಂ: ನಮೋ ಬುದ್ದ ಸೇವಾ ಕೇಂದ್ರ ವತಿಯಿಂದ ದಿನಾಂಕ ೦೨.೦೧.೨೦೨೫ ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಳಖೇಡದಲ್ಲಿ , ಮುರಾರ್ಜಿ ದೇಸಾಯಿ,ಏಕಲವ್ಯ ,ಆದರ್ಶ, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ ವಸತಿ ಶಾಲೆಗಳಿಗೆ ಪರೀಕ್ಷೆ ಪೊರ್ವ ಉಚಿತ ತರಬೇತಿಯ ಉದ್ಘಾಟಿಸಲಾಯಿತು.
ಉದ್ಘಾಟಕರಾಗಿ ಸುರೇಖಾ ಕುಲ್ಕರ್ಣಿ ಮುಖ್ಯ ಗುರುಗಳು ಸರ್ಕಾರಿ ಕನ್ಯಾ ಪ್ರೌಢ ಶಾಲೆ ಮಳಖೇಡ ಇವರು ಮಾತನಾಡುತ್ತಾ ಸುಮಾರು ವರ್ಷಗಳಿಂದ ಇಂತಹ ತರಬೇತಿಯನ್ನು ಮಕ್ಕಳಿಗೆ ಉಚಿತವಾಗಿ ನಮೋ ಬುದ್ದ ಸೇವಾ ಕೇಂದ್ರ ನೀಡುತ್ತಾ ಬರುತ್ತಿದೆ, ವಿದ್ಯಾರ್ಥಿಗಳು ಒಂದು ಗುರಿ ಇಟ್ಟುಕೊಂಡು ಓದಬೇಕು, ಇಂತಹ ತರಬೇತಿಯಿಂದ ಸಾಧನೆ ಮಾಡಲು ಸಾಧ್ಯವಾಗುವುದು. ಉತ್ತಮವಾಗಿ ಅಭ್ಯಾಸ ಹಾಗೂ ಸಮಯ ಹಾಳು ಮಾಡದೆ ತರಬೇತಿಯ ಲಾಭವನ್ನು ಪಡೆದು ಕೊಳ್ಳ ಬೇಕು. ಯಾವುದೇ ಫಲಾಪೆಕ್ಷ ವಿಲ್ಲದೆ ಇಂತಹ ಕಾರ್ಯಕ್ರಮಗಳು ಬಡ ಮಕ್ಕಳಿಗೆ ತುಂಬಾ ಉಪಯುಕ್ತವಾಗುತ್ತಿವೆ. ಇಷ್ಟ ಪಟ್ಟು ಓದಿ ವಸತಿ ಶಾಲೆ ಗಳಿಗೆ ಪ್ರವೇಶ ಪಡೆದರೆ, ವಸತಿ ಶಾಲೆಯಲ್ಲಿ ಉತ್ತಮ ಪರಿಸರ ಹಾಗೂ ಎಲ್ಲಾ ಸೌಲಭ್ಯಗಳನು ಪಡೆಯುವ ಮುಖಾಂತರ ಮಕ್ಕಳು ಉತ್ತಮ ಭವಿಷ್ಯ ರೂಪಿಸಿ ಕೊಳ್ಳಬಹು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶರಣು ರಂಗನ್ ಗ್ರಾಮ ಪಂಚಾಯಿತಿ ಸದಸ್ಯರು , ಅರವಿಂದ್ ಕುಲ್ಕರ್ಣಿ,ರೊಹಿಣಿ ಕುಲ್ಕರ್ಣಿ, ಅರುಣಕುಮಾರ ಬಿರಾದಾರ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆ ಅರುಣಕುಮಾರ ಬಿರಾದಾರ.ಸ್ವಾಗತ ಹಾಗೂ ಪ್ರಾಸ್ತಾವಿಕ ರಾಜು ಕಟ್ಟಿ ಅವರಿಂದ ನಡೆಯಿತು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್